ನವದೆಹಲಿ: 4 ಸಹಕಾರಿ ಬ್ಯಾಂಕುಗಳ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ನಿರ್ಬಂಧ ಹೇರಿದೆ.
ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್, ನವದೆಹಲಿಯಲ್ಲಿರುವ ರಾಮ್ ಗರ್ಹಿಯಾ ಸಹಕಾರಿ ಬ್ಯಾಂಕ್, ಮುಂಬೈನ ಸಾಹೇಬರಾವ್ ದೇಶಮುಖ ಸಹಕಾರಿ ಬ್ಯಾಂಕ್, ಸಾಂಗ್ಲಿಯ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಆರ್.ಬಿ.ಐ. ನಿರ್ಬಂಧ ಹೇರಿದೆ. ಗ್ರಾಹಕರಿಗೆ ಆರು ತಿಂಗಳವರೆಗೆ ನಿರ್ಬಂಧ ವಿಧಿಸಲಾಗಿದೆ.
ಆರು ತಿಂಗಳವರೆಗೆ ಈ ನಿರ್ಬಂಧಗಳನ್ನು ವಿಧಿಸಿದ್ದು, ಇದು ಠೇವಣಿದಾರರಿಗೆ ಹಣ ಹಿಂಪಡೆಯುವಿಕೆಯ ಮಿತಿ ಒಳಗೊಂಡಿದೆ. ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿ ಕೇಂದ್ರ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಅಡಿಯಲ್ಲಿ ನಿರ್ಬಂಧ ವಿಧಿಸಿದೆ.
ಶುಕ್ರವಾರ ಹೊರಡಿಸಿದ ಆರ್.ಬಿ.ಐ. ನಿರ್ದೇಶನದ ಪ್ರಕಾರ, ಜುಲೈ 8, 2022 ರಂದು ವ್ಯವಹಾರದ ಅವಧಿಯನ್ನು ಮುಗಿದ ನಂತರ ನಿರ್ಬಂಧ ಜಾರಿಗೆ ಬಂದಿದೆ. ಆರ್.ಬಿ.ಐ. ಪೂರ್ವಾನುಮತಿ ಇಲ್ಲದೆ, ಈ ನಾಲ್ಕು ಬ್ಯಾಂಕ್ ಗಳು ಯಾವುದೇ ಸಾಲವನ್ನು ನೀಡಲು ಅಥವಾ ನವೀಕರಿಸಲು, ಹೂಡಿಕೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಇದಲ್ಲದೆ, ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಠೇವಣಿದಾರರ ಹಿಂಪಡೆಯುವಿಕೆಗೆ ಮಿತಿಯನ್ನು ವಿಧಿಸಲಾಗಿದೆ.
ರಾಮಗರ್ಹಿಯಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 50,000 ರೂ.
ಸಾಹೇಬರಾವ್ ದೇಶಮುಖ್ ಸಹಕಾರಿ ಬ್ಯಾಂಕ್ – ಠೇವಣಿದಾರರಿಗೆ ಮತ್ತೆ 50,000 ರೂ.
ಸಾಂಗ್ಲಿ ಸಹಕಾರಿ ಬ್ಯಾಂಕ್- ಪ್ರತಿ ಠೇವಣಿಗೆ 45,000 ರೂ.
ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 7,000 ರೂ. ವಿತ್ ಡ್ರಾ ಮಾಡಬಹುದಾಗಿದೆ.