
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿರೀಕ್ಷೆಯಂತೆ ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮನೆ, ವಾಹನ ಸಾಲದ ಇಎಂಐ ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಸತತ 10ನೇ ಅವಧಿಗೆ ರೆಪೊ ಮತ್ತು ರಿವರ್ಸ್ ರೆಪೊ ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಮನೆ ಮತ್ತು ವಾಹನ ಸಾಲ ಪಡೆದುಕೊಂಡವರ ಇಎಂಐ ನರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಬಡ್ಡಿ ದರದಲ್ಲಿ ವ್ಯತ್ಯಾಸವಾಗದೇ ಇರುವುದರಿಂದ ಹೊಸದಾಗಿ ಮನೆ ಮತ್ತು ವಾಹನ ಸಾಲ ಪಡೆಯಲು ಇದು ಸಕಾಲವಾಗಿದ್ದು, ಬಡ್ಡಿ ದರದಲ್ಲಿ ಬದಲಾವಣೆಯಾಗದ ಕಾರಣ ಸ್ಥಿರ ಠೇವಣಿಗಳ ಬಡ್ಡಿದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಕೂಡ ಇಲ್ಲ ಎನ್ನಲಾಗಿದೆ.