
ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ನೆಮ್ಮದಿ ಸುದ್ದಿ ಸಿಕ್ಕಿಲ್ಲ. ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ರೆಪೊ ದರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಇಎಂಐ ಅಥವಾ ಸಾಲದ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ಬಾರಿ ಆರ್.ಬಿ.ಐ. ರೆಪೋ ದರವನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ನೆಮ್ಮದಿ ನೀಡಲಿದೆ ಎಂಬ ನಿರೀಕ್ಷೆಯಿತ್ತು. ಕೊರೊನಾ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಶೀಲನೆಯ ಮೂರನೇ ಸಭೆ ಇದಾಗಿತ್ತು.
ಕೊರೊನಾ ಬಿಕ್ಕಟ್ಟಿನಿಂದಾಗಿ ಹಿಂದೆ ನಡೆದ ಎರಡೂ ಸಭೆಯಲ್ಲಿ ರಿಸರ್ವ್ ಬ್ಯಾಂಕಿನ ಒಟ್ಟು ರೆಪೊ ದರವನ್ನು ಶೇಕಡಾ 1.15 ರಷ್ಟು ಕಡಿಮೆ ಮಾಡಲಾಗಿತ್ತು. ಕಳೆದ ವರ್ಷದ ನಂತರ ಅಂದರೆ 2019 ರ ಫೆಬ್ರವರಿ ನಂತರ ರೆಪೊ ದರವನ್ನು ಶೇಕಡಾ 2.50 ರಷ್ಟು ಕಡಿತಗೊಳಿಸಲಾಗಿದೆ.