ಕೊರೊನಾ ಎರಡನೇ ಅಲೆ ಮಧ್ಯೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಜನರಿಗೆ ನೆಮ್ಮದಿ ಸುದ್ದಿ ನೀಡಿದ್ದಾರೆ. ಕೆವೈಸಿಗೆ ಸಂಬಂಧಿಸಿದಂತೆ ಬ್ಯಾಂಕ್ ಗ್ರಾಹಕರಿಗೆ ಶಕ್ತಿಕಾಂತ್ ದಾಸ್ ನೆಮ್ಮದಿ ನೀಡಿದ್ದಾರೆ. ನಿಗದಿತ ಸಮಯದಲ್ಲಿ ಕೆವೈಸಿ ಆಗದೆ ಹೋದಲ್ಲಿ ಡಿಸೆಂಬರ್ 31 ರವರೆಗೆ ಯಾವುದೇ ಖಾತೆಯನ್ನು ಫ್ರೀಜ್ ಮಾಡಬಾರದು ಎಂದವರು ಹೇಳಿದ್ದಾರೆ.
ಕೆವೈಸಿ ಕಾರಣ ಹೇಳಿ ಡಿಸೆಂಬರ್ 31 ರವರೆಗೆ ಬ್ಯಾಂಕುಗಳು ಯಾರೊಬ್ಬರ ಖಾತೆಯನ್ನು ಫ್ರೀಜ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಅನೇಕರಿಗೆ ಹಣದ ಅಗತ್ಯವಿದೆ. ಆದ್ರೆ ಕೆವೈಸಿ ಕಾರಣ ಹೇಳಿ ಅವರ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಇದ್ರಿಂದಾಗಿ ಖಾತೆದಾರರಿಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಖಾತೆ ಫ್ರೀಜ್ ಮಾಡುವ ಮೊದಲು ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಖಾತೆಗಳ ಕೆವೈಸಿ ನವೀಕರಿಸಲು 4-5 ದಿನಗಳು ಅಥವಾ ಕೆಲವೊಮ್ಮೆ ಒಂದು ವಾರ ತೆಗೆದುಕೊಳ್ಳುತ್ತದೆ.
ರಿಸರ್ವ್ ಬ್ಯಾಂಕಿನ ಈ ಹೊಸ ಆದೇಶದ ನಂತರ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಕೆವೈಸಿ ಮಾಡಲು ಗ್ರಾಹಕರಿಗೆ 31 ಡಿಸೆಂಬರ್ 31ರವರೆಗೆ ಅವಕಾಶ ಸಿಕ್ಕಂತಾಗಿದೆ. ವಿಡಿಯೋ ಕೆವೈಸಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಘೋಷಿಸಿದೆ. ಗ್ರಾಹಕರು ತಮ್ಮ ಕೆವೈಸಿಯನ್ನು ನವೀಕರಿಸಿಕೊಳ್ಳಬೇಕೆಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕೆವೈಸಿ ನವೀಕರಿಸಲು ಎಲ್ಲಾ ಡಿಜಿಟಲ್ ಮಾರ್ಗವನ್ನು ಬಳಸಬಹುದು ಎಂದವರು ಹೇಳಿದ್ದಾರೆ.