ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ಷೇರುಪೇಟೆ ಜಿಗಿತ ಕಂಡಿದೆ.
ಇದೇ ವೇಳೆ ಚಿನ್ನದ ದರ ಕೂಡ ದುಬಾರಿಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಚಿನ್ನದ ದರ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ 587 ರೂಪಾಯಿ ಏರಿಕೆಯಾಗಿದ್ದು, 45,768 ರೂಪಾಯಿ ತಲುಪಿದೆ. ಅದೇ ರೀತಿ ಬೆಳ್ಳಿ ಬೆಲೆ ಕೆಜಿಗೆ 682 ರೂಪಾಯಿ ಹೆಚ್ಚಳವಾಗಿದ್ದು 65,468 ರೂಪಾಯಿಗೆ ತಲುಪಿದೆ. ಬೇಡಿಕೆ ಹೆಚ್ಚಿದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.