ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ಸೋಮವಾರದಿಂದ ಶುರುವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನ ಪ್ರತಿ ಗ್ರಾಂಗೆ 4790 ರೂಪಾಯಿ ನಿಗದಿಪಡಿಸಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ನಡೆಯಲಿದೆ. ಆಗಸ್ಟ್ 17 ರಂದು ಬಾಂಡ್ ವಿತರಿಸಲಾಗುವುದು. ಆನ್ಲೈನ್ ಮೂಲಕ ಬಾಂಡ್ ಖರೀದಿಗೆ ಅರ್ಜಿ ಸಲ್ಲಿಸುವವರಿಗೆ ಪ್ರತಿ ಗ್ರಾಂನಲ್ಲಿ 50 ರೂ. ವಿನಾಯಿತಿ ನೀಡಲಾಗುವುದು.
ಆಯ್ದ ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಅಫ್ ಇಂಡಿಯಾ, ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಬಾಂಡ್ ಮಾರಾಟ ಮಾಡಲಾಗುತ್ತದೆ. ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದ್ದು ವೈಯಕ್ತಿಕ ಖರೀದಿದಾರರಿಗೆ ಹಾಗೂ ಹಿಂದು ಅವಿಭಕ್ತ ಕುಟುಂಬಕ್ಕೆ 4 ಕೆಜಿ ವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟ್ ಗಳಿಗೆ 20 ಕೆಜಿ ಹೂಡಿಕೆ ಮಾಡಲು ಅವಕಾಶವಿದೆ.