ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಬ್ಯಾಂಕ್ ಉದ್ಯೋಗಿಗಳಿಗೆ ವಾರ್ಷಿಕ 10 ದಿನಗಳ ವಾರ್ಷಿಕ ರಜೆಯ ಸರ್ಪ್ರೈಜ್ ಗಿಫ್ಟ್ ನೀಡಿದೆ.
ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಕನಿಷ್ಠ 10 ದಿನಗಳ ಅನಿರೀಕ್ಷಿತ ನೀಡಬಹುದಾಗಿದೆ. ಟ್ರೆಜರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್ ಮೊದಲಾದ ಅತಿಸೂಕ್ಷ್ಮ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷ 10 ದಿನಗಳ ರಜೆ ನೀಡಲಾಗುವುದು.
ಇಂತಹ ರಜೆಗಳನ್ನು ನೀಡುವ ಬಗ್ಗೆ ಮೊದಲೇ ತಿಳಿಸುವುದಿಲ್ಲ. ಅನಿರೀಕ್ಷಿತ ರಜೆ ನೀಡಲಾಗುತ್ತದೆ. ಬ್ಯಾಂಕ್ ಗಳ ನಿರ್ದೇಶಕರ ಮಂಡಳಿಯ ಅನುಮೋದನೆಗೊಂಡ ನೀತಿಯ ಪ್ರಕಾರ ಸೂಕ್ಷ್ಮ ಹುದ್ದೆಗಳ ಪಟ್ಟಿಯನ್ನು ತಯಾರಿಸಿ ಪರಿಶೀಲಿಸುವಂತೆ ತಿಳಿಸಲಾಗಿದೆ. 10 ದಿನ ಅನಿರೀಕ್ಷಿತ ರಜೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸೂಚನೆ ನೀಡಲಾಗಿದೆ.
ಈ ಅನಿರೀಕ್ಷಿತ ರಜೆಯ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿ ಸಾಮಾನ್ಯ ಉದ್ದೇಶಕ್ಕೆ ನೀಡಲಾದ ಕಾರ್ಪೊರೇಟ್ ಇ –ಮೇಲ್ ಹೊರತಾಗಿ ಯಾವುದೇ ಕೆಲಸ ನಿರ್ವಹಿಸಬೇಕಿಲ್ಲ ಎಂದು ಹೇಳಲಾಗಿದೆ.