ಆರ್ಬಿಐ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಚಿನ್ನದ ಆಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿದೆ. ಇನ್ಮುಂದೆ ಚಿನ್ನದ ಮೇಲೆ ಶೇಕಡಾ 90 ರಷ್ಟು ಸಾಲ ಸಿಗಲಿದೆ. ಇಲ್ಲಿಯವರೆಗೆ ಚಿನ್ನದ ಒಟ್ಟು ಮೌಲ್ಯದ ಶೇಕಡಾ 75 ರಷ್ಟು ಸಾಲ ಮಾತ್ರ ಸಿಗ್ತಿತ್ತು.
ಚಿನ್ನದ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮೊದಲು ಚಿನ್ನದ ಗುಣಮಟ್ಟವನ್ನು ಪರಿಶೀಲಿಸುತ್ತವೆ. ಸಾಲದ ಮೊತ್ತವನ್ನು ಚಿನ್ನದ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಬ್ಯಾಂಕುಗಳು ಸಾಮಾನ್ಯವಾಗಿ ಚಿನ್ನದ ಮೌಲ್ಯದ ಶೇಕಡಾ 75 ರಷ್ಟು ಸಾಲವನ್ನು ನೀಡುತ್ತವೆ.
ಕೊರಾನಾ ಬಿಕ್ಕಟ್ಟಿನಲ್ಲಿ ಆರ್.ಬಿ.ಐ. ಈ ನಿರ್ಧಾರವು ಪ್ರಯೋಜನಕಾರಿಯಾಗಲಿದೆ. ಸಾಮಾನ್ಯ ಜನರು ಮತ್ತು ಸಣ್ಣ ಉದ್ಯಮಿಗಳು ತಮ್ಮ ಚಿನ್ನದ ಮೇಲೆ ಹೆಚ್ಚು ಸಾಲ ಪಡೆಯಲು ಇನ್ಮುಂದೆ ಸಾಧ್ಯವಾಗಲಿದೆ.