ಮುಂಬೈ: ಠೇವಣಿ ಕ್ಲೇಮ್ ಮಾಡದ ಬಡ್ಡಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಇಡಲಾದ ನಿಶ್ಚಿತ ಠೇವಣಿ ಅವಧಿ ಮುಗಿದ ನಂತರವೂ ಅದನ್ನು ಕ್ಲೇಮ್ ಮಾಡದಿದ್ದರೆ ಗಡುವಿನ ದಿನಾಂಕದ ಬಳಿಕ ಅದಕ್ಕೆ ನೀಡುವ ಬಡ್ಡಿದರದ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಾವಣೆ ಮಾಡಿದೆ.
ಠೇವಣಿ ಅವಧಿ ಮುಕ್ತಾಯವಾದರೂ ಅದನ್ನು ವಿತ್ ಡ್ರಾ ಮಾಡದಿದ್ದರೆ, ಅಂತಹ ಠೇವಣಿ ಹಣಕ್ಕೆ ಉಳಿತಾಯ ಖಾತೆಗೆ ನೀಡಲಾಗುವ ಬಡ್ಡಿ ಅಥವಾ ಠೇವಣಿ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಬಡ್ಡಿದರದಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಎಲ್ಲಾ ಬ್ಯಾಂಕುಗಳು, ಸಣ್ಣ ಉಳಿತಾಯ ಸಂಸ್ಥೆಗಳು, ಸ್ಥಳೀಯ ಬ್ಯಾಂಕುಗಳು ಮತ್ತು ಸಹಕಾರಿ ವಲಯದ ಬ್ಯಾಂಕುಗಳಿಗೆ ಕ್ಲೇಮ್ ಮಾಡದ ಠೇವಣಿ ಬಡ್ಡಿ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ.