alex Certify ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮತ್ತೊಂದು ಹಸಿರು ಕ್ರಾಂತಿ: RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮತ್ತೊಂದು ಹಸಿರು ಕ್ರಾಂತಿ: RBI

ಭಾರತದಲ್ಲಿ ಮತ್ತೊಂದು ಹಸಿರುಕ್ರಾಂತಿಯ ಅಗತ್ಯವಿದೆ ಎಂದು RBI ಹೇಳಿದೆ.

ಕೃಷಿಯನ್ನು ಹೆಚ್ಚು ಹವಾಮಾನ-ನಿರೋಧಕ ಮತ್ತು ಪರಿಸರ ಸಮರ್ಥನೀಯವಾಗಿಸುವ ಅಥವಾ ಸ್ನೇಹಿಯಾಗುವ ದೃಷ್ಟಿಯಿಂದ ಭಾರತಕ್ಕೆ ಮುಂದಿನ ಪೀಳಿಗೆಯ ಸುಧಾರಣೆಗಳ ಜೊತೆಗೆ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಕೃಷಿ ಕ್ಷೇತ್ರದ ಸವಾಲುಗಳ ಕುರಿತ ಲೇಖನದಲ್ಲಿ ಆರ್‌ಬಿಐ ಹೇಳಿದೆ.

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ರಸಗೊಬ್ಬರ ನೀಡಲು 1.4 ಲಕ್ಷ ಕೋಟಿ ರೂ. ಸಬ್ಸಿಡಿ

ಕೋವಿಡ್ -19 ಅವಧಿಯಲ್ಲಿ ಭಾರತೀಯ ಕೃಷಿಯು ಗಮನಾರ್ಹವಾದ ಪ್ರದರ್ಶನ ನೀಡಿದೆ. ಆದರೆ ಭಾರತದಲ್ಲಿರುವ ಹೊಸ ಸವಾಲುಗಳನ್ನ ಎದುರಿಸಬೇಕೆಂದರೆ ಎರಡನೇ ಹಸಿರು ಕಾಂತಿಯಾಗಬೇಕೆಂದು ಲೇಖನ ಹೇಳುತ್ತದೆ. ಉತ್ಪಾದನೆಯ ವಿಷಯದಲ್ಲಿ ದೇಶದ ವ್ಯವಸಾಯ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಷ್ಟು ಯಶಸ್ಸು ಕಂಡಿದೆ‌. ಇದರ ಹೊರತಾಗಿಯೂ, ಆಹಾರದ ಹಣದುಬ್ಬರ ಮತ್ತು ಅದರ ಚಂಚಲತೆಯು ಸವಾಲಾಗಿ ಉಳಿದಿದೆ. ಇದನ್ನ ಇಲ್ಲವಾಗಿಸಬೇಕೆಂದರೆ ಹೆಚ್ಚಿನ ಸಾರ್ವಜನಿಕ ಹೂಡಿಕೆ, ಶೇಖರಣೆಗೆ ಮೂಲಸೌಕರ್ಯ ಮತ್ತು ಆಹಾರ ಸಂಸ್ಕರಣೆಯ ಉತ್ತೇಜನ ಸೇರಿದಂತೆ ಪೂರ್ಣ ಪೂರೈಕೆಯ ಅಗತ್ಯವಿದೆ ಎಂದು ಭಾರತೀಯ ಕೃಷಿ:ಸಾಧನೆಗಳು ಮತ್ತು ಸವಾಲುಗಳು ಲೇಖನದಲ್ಲಿ ಸಲಹೆ ನೀಡಲಾಗಿದೆ.

ಕೋವಿಡ್-19 ಅವಧಿಯಲ್ಲಿ ವಿವಿಧ ಆಹಾರ ಧಾನ್ಯಗಳು, ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳ ದಾಖಲೆ ಉತ್ಪಾದನೆ, ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವುದು ಮತ್ತು ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವುದರೊಂದಿಗೆ ಭಾರತೀಯ ಕೃಷಿಯು ಹೊಸ ಎತ್ತರಕ್ಕೆ ಏರಿದೆ. ಆದರೂ, ಕೃಷಿ ವಲಯವು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ, ಇವುಗಳನ್ನು ತಗ್ಗಿಸಲು ಸಮಗ್ರ ನೀತಿ ವಿಧಾನದ ಅಗತ್ಯವಿದೆ.

ಇತರ ಸುಧಾರಿತ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದೆರೆ ಭಾರತದಲ್ಲಿ ಬೆಳೆ ಉತ್ಪಾದಕತೆಯು ಆರ್ಥಿಕವಾಗಿ ಹಿಂದುಳಿದಿದೆ. ವಿಭಜಿತ ಭೂಹಿಡುವಳಿಗಳು, ಕಡಿಮೆ ಕೃಷಿ ಯಾಂತ್ರೀಕರಣ ಮತ್ತು ಕೃಷಿಯಲ್ಲಿ ಕಡಿಮೆ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಸೇರಿದಂತೆ ವಿವಿಧ ಅಂಶಗಳು ಇದಕ್ಕೆ ಕಾರಣವಾಗಿದೆ. ಇದಕ್ಕೆ ಪರಿಹಾರ ಅಥವಾ ಮುಂದೆ ಕಾರ್ಯನಿರ್ವಹಿಸಬೇಕಾರದ ರೀತಿಯೆಂದರೆ, ಸಾವಯವ ಕೃಷಿಯನ್ನ ಅಳವಡಿಸಿಕೊಳ್ಳುವುದು. ಸಾರ್ವಜನಿಕ ಮತ್ತು ಖಾಸಗಿ‌ ಹೂಡಿಕೆಗೆ ಆಸ್ಪದ ನೀಡುವುದು.‌ ಸ್ಮಾರ್ಟ್ ಕೃಷಿಗೆ ಒತ್ತು ನೀಡುವುದು. ಹಳೆ ಪದ್ಧತಿಗಳನ್ನ ಕೈಬಿಟ್ಟು, ಹೊಸ ಪದ್ಧತಿಗಳತ್ತ ಮುನ್ನುಗ್ಗವುದು, ಒಂದೇ ಬೆಳೆಯ ಬದಲು ವಿವಿಧ ಬೆಳೆಗಳನ್ನ ಬೆಳೆಯುವುದು. ಪರಿಸರ ಸ್ನೇಹಿ ಹಾಗೂ ಹವಾಮಾನ-ನಿರೋಧಕ ಕೃಷಿಯತ್ತ ಸಾಗುವುದು ಎಂದು RBI ಲೇಖನದಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...