ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇಕಡಾ 0.4 ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಎಂ.ಸಿ.ಎಲ್.ಆರ್. ಮತ್ತು ಇ.ಬಿ.ಎಲ್.ಆರ್. ಬಡ್ಡಿದರ ಏರಿಕೆ ಮಾಡಿವೆ. ಒಂದು ವರ್ಷದ ಅವಧಿಗೆ ಅನ್ವಯವಾಗುವಂತೆ ಬ್ಯಾಂಕುಗಳು ಬಡ್ಡಿ ದರವನ್ನು ಹೆಚ್ಚಳ ಮಾಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂ.ಸಿ.ಎಲ್.ಆರ್. ಬಡ್ಡಿದರ 7.10 ರಷ್ಟು ಏರಿಕೆಯಾಗಿದೆ. ಎಸ್ಬಿಐ ನಿಂದ ವಿವಿಧ ಅವಧಿಯ ಠೇವಣಿಗೆ ಮೇಲೆ ನೀಡುವ ಬಡ್ಡಿಯನ್ನು 40 ರಿಂದ 90 ಮೂಲಾಂಶದಷ್ಟು ಹೆಚ್ಚಳ ಮಾಡಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಬಿ.ಆರ್.ಎಲ್.ಎಲ್.ಆರ್. ಬಡ್ಡಿ ದರವನ್ನು ಶೇಕಡ 6.90 ಏರಿಕೆ ಮಾಡಿದೆ.
ಕೆನರಾ ಬ್ಯಾಂಕ್ ಆರ್.ಎಲ್.ಎಲ್.ಆರ್. ಬಡ್ಡಿ ದರವನ್ನು ಶೇಕಡ 7.30 ಕ್ಕೆ ಹೆಚ್ಚಳ ಮಾಡಿದೆ.
ಐಸಿಐಸಿಐ ಬ್ಯಾಂಕ್ ಐ-ಇ.ಬಿ.ಎಲ್.ಆರ್. ಬಡ್ಡಿದರ ಶೇಕಡ 8.10 ಕ್ಕೆ ಹೆಚ್ಚಳ ಮಾಡಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾ ಇ.ಬಿ.ಎಲ್.ಎಲ್. ಬಡ್ಡಿದರ ಶೇಕಡ 7.25 ಕ್ಕೆ ಏರಿಕೆ ಕಂಡಿದೆ.
ಆಕ್ಸಿಸ್ ಬ್ಯಾಂಕ್ ಎಂ.ಸಿ.ಎಲ್.ಆರ್. ಬಡ್ಡಿದರ ಶೇಕಡಾ 7.45 ಕ್ಕೆ ಹೆಚ್ಚಳವಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇ.ಬಿ.ಎಲ್.ಎಲ್. ಬಡ್ಡಿದರ ಶೇಕಡ 6.80 ಕ್ಕೆ ಹೆಚ್ಚಳವಾಗಿದೆ.
ಯೆಸ್ ಬ್ಯಾಂಕ್ ಎಂ.ಸಿ.ಎಲ್.ಆರ್. ಬಡ್ಡಿ ದರ ಶೇಕಡ 8.60 ಕ್ಕೆ ಏರಿಕೆ ಕಂಡಿದೆ.