ನವದೆಹಲಿ: ಕೇಂದ್ರ ಸರ್ಕಾರಕ್ಕೆ ಲಾಭಾಂಶದಲ್ಲಿ 57,128 ಕೋಟಿ ರೂಪಾಯಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಮುಂದಾಗಿದೆ.
ಕೊರೋನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ನೀಡಲಾಗುವುದು. ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಈ ಹಿಂದೆಯೂ ಲಾಭಾಂಶ ನೀಡಲಾಗಿದೆ. ಡಿಮಾನಿಟೈಸೇಷನ್ ಸಂದರ್ಭದಲ್ಲಿ 30,667 ಕೋಟಿ ರೂ. ನೀಡಲಾಗಿತ್ತು. 2017 -18 ರಲ್ಲಿ 50,000 ಕೋಟಿ ರೂ., 2018 -19 ರಲ್ಲಿ 65,896 ಕೋಟಿ ರೂ. ನೀಡಲಾಗಿತ್ತು.
ಈಗ ಕೇಂದ್ರ ಸರ್ಕಾರಕ್ಕೆ 57,128 ಕೋಟಿ ರೂ. ಲಾಭಾಂಶವನ್ನು ನೀಡಲು ಆರ್‌ಬಿಐ ಅನುಮೋದಿಸಿದೆ. ಸರ್ಕಾರದ ಆದಾಯ ಸಂಗ್ರಹಣೆಯ ಮೇಲೆ ಕೊರೊನಾ ಲಾಕ್ಡೌನ್ ಪರಿಣಾಮ ಬೀರಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಸರ್ಕಾರದ ಹಣಕಾಸಿನ ಕೊರತೆಯು 6.62 ಲಕ್ಷ ಕೋಟಿ ರೂ. ದಾಖಲೆಯಾಗಿದೆ.