alex Certify BIG SHOCKING: ಕರೆನ್ಸಿ ನೋಟುಗಳಿಂದಲೂ ಕೊರೊನಾ ಸೋಂಕು – RBI ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ CAIT | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಕರೆನ್ಸಿ ನೋಟುಗಳಿಂದಲೂ ಕೊರೊನಾ ಸೋಂಕು – RBI ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ CAIT

ನವದೆಹಲಿ: ಕರೆನ್ಸಿ ನೋಟುಗಳ ಮೂಲಕವು ಕೊರೊನಾ ಸೋಂಕು ಹರಡಬಹುದಾದ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಂತೆ ಕರೆನ್ಸಿ ನೋಟುಗಳ ಮೂಲಕವು ಕೊರೊನಾ ವೈರಸ್ ಸೇರಿದಂತೆ ಸೋಂಕು, ಬ್ಯಾಕ್ಟೀರಿಯಾ ಹರಡಬಹುದಾದ ಸಾಧ್ಯತೆ ಇದೆ. ನೋಟುಗಳು ಕೊರೊನಾ ವೈರಸ್ ಹರಡುವ ಸಂಭಾವ್ಯ ವಾಹಕಗಳಾಗಿವೆ. ಹಾಗಾಗಿ ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡಲಾಗಿದೆ.

ಸಿಎಐಟಿ ವತಿಯಿಂದ ಮಾರ್ಚ್ 9, 2020 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಕರೆನ್ಸಿ ನೋಟುಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಾಹಕಗಳಾಗಿವೆಯೇ…? ಅಥವಾ ಇಲ್ಲವೇ…? ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕೋರಲಾಗಿತ್ತು.

ಹಣಕಾಸು ಸಚಿವಾಲಯ ಈ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ರವಾನಿಸಿದ್ದು ಆರ್.ಬಿ.ಐ.ನಿಂದ ಸಿಎಐಟಿಗೆ ಉತ್ತರ ನೀಡಲಾಗಿದೆ. ಕರೆನ್ಸಿ ನೋಟುಗಳು ಕೊರೊನಾ ವೈರಸ್ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಾಹಕಗಳಾಗಿರಬಹುದು. ಇದನ್ನು ತಪ್ಪಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಯನ್ನು ಹೆಚ್ಚು ಬಳಕೆ ಮಾಡಬೇಕೆಂದು ಸುಳಿವು ನೀಡಿದೆ ಎಂದು ಸಿಎಐಟಿ ಹೇಳಿಕೆಯಲ್ಲಿ ತಿಳಿಸಿದೆ.

ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಅವರ ಪ್ರಕಾರ, ಆರ್ಬಿಐ ನೀಡಿರುವ ಉತ್ತರದಂತೆ ನೋಟುಗಳಲ್ಲಿ ಕೊರೊನಾ ವೈರಸ್ ಮತ್ತು ಬ್ಯಾಕ್ಟೀರಿಯಾ ಹರಡಬಹುದು. ಕರೆನ್ಸಿ ನೋಟುಗಳ ಬಳಕೆ ತಪ್ಪಿಸಲು ಡಿಜಿಟಲ್ ವಹಿವಾಟಿಗೆ ಸೂಚಿಸಲಾಗಿದೆ. ಇದಲ್ಲದೆ, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಮತ್ತು ಅಳವಡಿಸಲು ಪ್ರೋತ್ಸಾಹಕ ಯೋಜನೆಗಳನ್ನು ಪರಿಚಯಿಸುವಂತೆ ತಿಳಿಸಲಾಗಿದೆ.

ಡಿಜಿಟಲ್ ವಹಿವಾಟಿಗೆ ವಿಧಿಸುವ ಬ್ಯಾಂಕ್ ಶುಲ್ಕಗಳನ್ನು ಮನ್ನಾ ಮಾಡಬೇಕು. ಬ್ಯಾಂಕ್ ಶುಲ್ಕಗಳಿಗೆ ಬದಲಾಗಿ ಸರ್ಕಾರ ನೇರವಾಗಿ ಬ್ಯಾಂಕುಗಳಿಗೆ ಸಹಾಯ ಧನ ನೀಡಬೇಕು. ಇಂತಹ ಸಬ್ಸಿಡಿಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಆಗುವುದಿಲ್ಲ. ಇದು ಬ್ಯಾಂಕ್ ನೋಟುಗಳ ಮುದ್ರಣಕ್ಕೆ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...