ವಿರಳವಾದ ವಜ್ರದ ಕಲೆಕ್ಷನ್ಗಳಲ್ಲಿ ಒಂದಾದ ನೇರಳೆ ಮಿಶ್ರಿತ ಕೆಂಪು ಬಣ್ಣದ ವಜ್ರದ ಉಂಗುರ ಜೆನಿವಾದಲ್ಲಿ ಬರೋಬ್ಬರಿ 2.77 ಮಿಲಿಯನ್ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.
ವಿಎಸ್2 ಕ್ಲಾರಿಟಿ ಹಾಗೂ 1.05 ಕ್ಯಾರಟ್ನ ಈ ವಜ್ರವನ್ನ ಪ್ಲಾಟಿನಮ್ ಉಂಗುರದಲ್ಲಿ ಇರಿಸಲಾಗಿದೆ. ಈ ನೇರಳೆ ಮಿಶ್ರಿತ ಕೆಂಪು ಬಣ್ಣದ ವಜ್ರದ ಪಕ್ಕದಲ್ಲಿ ಹೃದಾಯಾಕಾರದ 2 ವಜ್ರಗಳನ್ನ ಇರಿಸಲಾಗಿದೆ. ಈ ವಜ್ರದ ವಿಶಿಷ್ಠವಾದ ಬಣ್ಣವೇ ಇದರ ಬೆಲೆ ದುಬಾರಿಯಾಗಲು ಕಾರಣವಾಗಿದೆ.
ಈ ವಿಶಿಷ್ಠವಾದ ಉಂಗುರವನ್ನ ದುಬೈ ಮೂಲದ ಭಾರತೀಯ ವಲಸಿಗ ಆಶಿಶ್ ವಿಜಯ್ ಜೈನ್ ಒಡೆತನದ ಟಿಯಾರಾ ಜೆಮ್ಸ್ & ಜ್ಯುವೆಲ್ಲರಿ ಅಂಗಡಿ ಖರೀದಿಸಿದೆ.
ದುಬಾರಿ ಉಂಗುರವನ್ನ ಖರೀದಿಸಿದ ಬಳಿಕ ಮಾತನಾಡಿದ ಆಶಿಶ್ ಜೈನ್, ಆಭರಣ ಮಾರುಕಟ್ಟೆ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ ಹಾಗೂ ದಿನದಿಂದ ದಿನಕ್ಕೆ ಸ್ಪರ್ಧೆಯೂ ಜಾಸ್ತಿಯಾಗುತ್ತಿದೆ. ಕೊರೊನಾ ಸಂಕಷ್ಟವಿದ್ದರೂ ಜನರಿಗೆ ಆಭರಣ ಮೇಲಿನ ಅದರಲ್ಲೂ ಈ ರೀತಿಯ ವಿಶಿಷ್ಠ ಹರಳುಗಳ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ ಅಂತಾ ಹೇಳಿದ್ರು.