![Rare Assam Tea Sells for Whopping Rs 75,000 Per Kg at Auction, Here's What Makes it Special](https://images.news18.com/ibnlive/uploads/2020/10/1604050200_untitled-design-2020-10-30t145600.278.jpg?impolicy=website&width=534&height=356)
ಕರೊನಾ ವೈರಸ್ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಗುವಾಹಟಿ ಚಹ ಕೇಂದ್ರ ವಿಶೇಷ ಚಹಾವನ್ನ ಪ್ರತಿ ಕೆಜಿಗೆ ದಾಖಲೆಯ 75 ಸಾವಿರ ರೂಪಾಯಿಗೆ ಖರೀದಿ ಮಾಡಿದೆ. ಇದು ಈ ವರ್ಷದ ಅತ್ಯಂತ ಹೆಚ್ಚಿನ ದರವಾಗಿದೆ ಅಂತಾ ಹೇಳಲಾಗಿದೆ.
ಒಂದು ವರ್ಷದ ನಂತರ ಜಿಟಿಎಸಿಗೆ ಮನೋಹರಿ ಗೋಲ್ಡ್ ಸ್ಪೆಷಾಲಿಟಿ ಚಹಾವನ್ನ ಪ್ರತಿ ಕೆಜಿಗೆ 75000ಕ್ಕೆ ಮಾರಾಟ ಮಾಡಲು ಮತ್ತೊಂದು ಅವಕಾಶ ಸಿಕ್ಕಿತು ಅಂತಾ ಗುವಾಹಟಿ ಟೀ ಹರಾಜು ಖರೀದಿದಾರರ ಸಂಘದ ಕಾರ್ಯದರ್ಶಿ ದಿನೇಶ್ ಬಿಹಾನಿ ಮಾಹಿತಿ ನೀಡಿದ್ರು.
ಈ ಚಹಾವನ್ನ ಕಾಂಟೆಂಪರರಿ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ಮಾರಾಟ ಮಾಡಿದೆ. ಹಾಗೂ ಗುವಾಹಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿ ಮಾಡಿದೆ. ಇದನ್ನ ಡಿಜಿಟಲ್ ಇ – ಕಾಮರ್ಸ್ ವೆಬ್ಸೈಟ್ 9amtea.com ನಲ್ಲಿ ವಿಶ್ವದಾದ್ಯಂತ ಮಾರಾಟ ಮಾಡಲಿದೆ ಎಂದು ಬಿಹಾನಿ ಹೇಳಿದರು.