
ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಉದ್ಯೋಗಿಗಳು ಕೆಲಸ ಸಿಕ್ಕ ನಂತ್ರ ಗ್ರ್ಯಾಚುಟಿಗಾಗಿ ಸತತ ಐದು ವರ್ಷ ಕಾಯಬೇಕಿತ್ತು. ಕೆಲವು ಕಾರಣಗಳಿಂದ ಕೆಲಸ ಕಳೆದುಕೊಂಡರೆ ಅವರಿಗೆ ಗ್ರ್ಯಾಚುಟಿ ಲಾಭ ಸಿಗುತ್ತಿರಲಿಲ್ಲ. ಈಗ ನಿಯಮ ಬದಲಾಗಿದೆ.
ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಮಸೂದೆಗೆ ಸದನದ ಅನುಮೋದನೆ ದೊರೆತಿದೆ. ಈ ಅನುಮೋದನೆಯ ನಂತರ, ಈಗ ಗ್ರ್ಯಾಚುಟಿ ತೆಗೆದುಕೊಳ್ಳಲು 5 ವರ್ಷಗಳ ಕಾಲ ಕಾಯಬೇಕಾಗಿಲ್ಲ. ಕಂಪನಿ ಪ್ರತಿ ವರ್ಷ ಗ್ರ್ಯಾಚುಟಿ ನೀಡಲಿದೆ. ಒಪ್ಪಂದದಲ್ಲಿ ಕೆಲಸ ಮಾಡುವ ನೌಕರರು ಒಪ್ಪಂದದ ಅವಧಿಯನ್ನು ಲೆಕ್ಕಿಸದೆ ಗ್ರಾಚ್ಯುಟಿಯ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ.
ಕಂಪನಿಯು ತನ್ನ ಉದ್ಯೋಗಿಗಳಿಗೆ ಗ್ರ್ಯಾಚುಟಿ ನೀಡಲಾಗುತ್ತದೆ. ನೌಕರನ ಸೇವೆಗೆ ಕಂಪನಿ ನೀಡುವ ಒಂದು ಮೊತ್ತ ಗ್ರ್ಯಾಚುಟಿ, ಇದರ ಗರಿಷ್ಠ ಮಿತಿ 20 ಲಕ್ಷ ರೂಪಾಯಿಗಳು. ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ, ಗ್ರ್ಯಾಚುಟಿ ಮೊತ್ತವನ್ನು ನೀಡಲು 5 ವರ್ಷಗಳ ಕೆಲಸವನ್ನು ಪೂರ್ಣಗೊಳಿಸುವುದು ಅನಿವಾರ್ಯವಾಗಿರಲಿಲ್ಲ.