ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಇರುವಂತೆ ರೈಲು ನಿಲ್ದಾಣದಲ್ಲಿಯೂ ಬಳಕೆದಾರರ ಶುಲ್ಕ ಜಾರಿಗೆ ತರಲು ರೈಲ್ವೆ ಮಂತ್ರಾಲಯ ತೀರ್ಮಾನಿಸಿದೆ.
ಅತಿ ಹೆಚ್ಚು ಜನಸಂದಣಿಯಿರುವ ಮತ್ತು ನವೀಕರಣಗೊಂಡಿರುವ ಶೇಕಡ 15 ರಷ್ಟು ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕವನ್ನು ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ಯಾದವ್ ಈ ಕುರಿತು ಮಾತನಾಡಿ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಆದಾಯ ಅಗತ್ಯವಿದೆ. ಹಾಗಾಗಿ ಬಳಕೆದಾರರ ಶುಲ್ಕ ವಿಧಿಸಲಾಗುವುದು. ಅತಿ ಹೆಚ್ಚು ಜನಸಂದಣಿ ಇರುವ ಮತ್ತು ನವೀಕರಣಗೊಂಡ ಶೇಕಡ 15 ರಷ್ಟು ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕ ವಿಧಿಸಲಾಗುವುದು ಎಂದು ಹೇಳಿದ್ದಾರೆ.