ನವದೆಹಲಿ: ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಲು ಮುಂದಾಗಿರುವ ರೈಲ್ವೆ ಇಲಾಖೆ ನಿಲ್ದಾಣಗಳಲ್ಲಿ ತಾಜಾ ಆಹಾರ ಮಾರಾಟಕ್ಕೆ ಅವಕಾಶ ನೀಡಿದೆ.
ರೈಲು ನಿಲ್ದಾಣಗಳಲ್ಲಿ ತಾಜಾ ಆಹಾರ ಮಾರಾಟಕ್ಕೆ ಅಸ್ತು ಎಂದಿರುವ ಇಲಾಖೆ ಅಲ್ಲೇ ತಿನ್ನುವಂತಿಲ್ಲವೆಂದು ಸೂಚಿಸಿದೆ. ರೈಲು ನಿಲ್ದಾಣಗಳಲ್ಲಿ ಇರುವ ಆಹಾರ ಮಳಿಗೆಗಳಲ್ಲಿ ಸಿದ್ಧಪಡಿಸಿದ ಆಹಾರ ಮಾರಾಟಕ್ಕೆ ಭಾರತೀಯ ರೈಲ್ವೆ ಅನುಮತಿ ನೀಡಿದೆ. ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗುತ್ತದೆ.
ಕೊರೊನಾ ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಮೊದಲ ಬಾರಿಗೆ ಸಿದ್ಧಪಡಿಸಿದ ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ನಿಲ್ದಾಣಗಳಲ್ಲಿ ತಾಜಾ ಆಹಾರ ಮಾರಾಟಕ್ಕೆ ಅವಕಾಶ ನೀಡಿದ್ದು, ಸ್ಥಳದಲ್ಲಿ ತಿನ್ನಲು ಅವಕಾಶ ನೀಡಿಲ್ಲವೆನ್ನಲಾಗಿದೆ.