ನವದೆಹಲಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿದೆ.
ಈ ನಡುವೆ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಶ್ರಮಿಕ್ ಎಕ್ಸ್ ಪ್ರೆಸ್ ಮತ್ತು ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿದೆ.
ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ, ಮಾಹಿತಿ ಪ್ರಕಾರ ಆಗಸ್ಟ್ ಮಧ್ಯದವರೆಗೆ ಸಾಮಾನ್ಯ ರೈಲುಗಳ ಸಂಚಾರ ಇರುವುದಿಲ್ಲ ಎಂದು ಹೇಳಲಾಗಿದೆ. ಇನ್ನು ಏಪ್ರಿಲ್ 14 ರ ವರೆಗೆ ಕಾಯ್ದಿರಿಸಲಾದ ಎಲ್ಲಾ ಟಿಕೆಟ್ ಗಳ ಸಂಪೂರ್ಣ ಬುಕಿಂಗ್ ಮೊತ್ತವನ್ನು ಭಾರತೀಯ ರೈಲ್ವೆ ಮರುಪಾವತಿ ಮಾಡಲಿದೆ.
ಪ್ರಸ್ತುತ 230 ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಇದೆ. ಇವುಗಳನ್ನು ವಿಶೇಷ ರೈಲುಗಳ ಸೇವೆ ಎಂದು ಪರಿಗಣಿಸಲಾಗಿದೆ. ಬೇಡಿಕೆಯ ಅನುಸಾರ ಹೆಚ್ಚುವರಿ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯ ಸಿದ್ಧವಿದೆ ಎನ್ನಲಾಗಿದ್ದರೂ ಸದ್ಯಕ್ಕೆ ಸಾಮಾನ್ಯ ರೈಲುಗಳ ಸಂಚಾರ ಇರುವುದಿಲ್ಲ ಎಂದು ಹೇಳಲಾಗಿದೆ.
ಇನ್ನು ಏಪ್ರಿಲ್ 14 ರವರೆಗೆ ಕಾಯ್ದಿರಿಸಿದ ಟಿಕೆಟ್ ಗಳನ್ನು ರದ್ದುಗೊಳಿಸಲಾಗಿದೆ. ಸಂಪೂರ್ಣ ಮೊತ್ತವನ್ನು ಮರು ಪಾವತಿ ಮಾಡುವಂತೆ ರೈಲ್ವೆ ಸಚಿವಾಲಯದ ವತಿಯಿಂದ ಎಲ್ಲಾ ವಲಯಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.