ಅಮೆರಿಕದಲ್ಲಿ ರಾಗಿಗೆ ಭಾರಿ ಬೇಡಿಕೆ ಬರತೊಡಗಿದೆ. ಒಂದು ಕೆಜಿ ರಾಗಿ ಬೆಲೆ 10 ಡಾಲರ್(ಸುಮಾರು 750) ರೂಪಾಯಿ ದರ ಇದೆ. ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಅನಿವಾಸಿ ಭಾರತೀಯರು ರಾಗಿ ಬಗ್ಗೆ ಆಸಕ್ತಿ ಹೊಂದಿದ ಕಾರಣ ಬೇಡಿಕೆ ಇದೆ.
ಮಧುಮೇಹಿಗಳಿಗೆ ರಾಗಿ ಉತ್ತಮ ಆಹಾರ ಎಂಬ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ. ವಾಷಿಂಗ್ಟನ್ ನಲ್ಲಿ ಕೆಜಿಗೆ 750 ರೂ. ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಇಲ್ಲಿಂದ ವ್ಯವಸ್ಥಿತವಾಗಿ ರಫ್ತು ಮಾಡಿದರೆ ಉತ್ತಮ ಧಾರಣೆ ಸಿಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಮನವಿಯಾಗಿದೆ.
ಕೇಂದ್ರ ಮಟ್ಟದಲ್ಲಿ ರಾಗಿ ಮಂಡಳಿ ಸ್ಥಾಪಿಸಿ ರಾಗಿಗೆ ಮಾರುಕಟ್ಟೆ ಒದಗಿಸಬೇಕು. ಮಧುಮೇಹಿಗಳಿಗೆ ಒಳ್ಳೆಯ ಆಹಾರ, ರಾಗಿಯಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.