ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೊಸ ಅಧಿಸೂಚನೆ ಹೊರಡಿಸಿದ್ದು, 20 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟು ಹೆಚ್ಚಿನ ಮೊತ್ತವನ್ನು ವಿತ್ ಡ್ರಾ ಮಾಡಲು ಅಥವಾ ಜಮಾ ಮಾಡಲು ಆಧಾರ್ ಕಾರ್ಡ್ ಇಲ್ಲವೇ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳ ಮೂಲಕ ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವ್ಯಕ್ತಿ ಅಥವಾ ಕಂಪನಿಗಳು ಹಣ ಜಮಾ ಮಾಡಲು ಇಲ್ಲವೇ ವಿತ್ ಡ್ರಾ ಮಾಡಲು ಆಧಾರ್ ಅಥವಾ ಪಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ.
ಒಂದು ಅಥವಾ ಅದಕ್ಕಿಂತ ಹೆಚ್ಚು ಖಾತೆಗಳ ಮೂಲಕ 20 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಹಣ ಜಮಾ ಮಾಡಿದರೆ ಆಧಾರ್ ಅಥವಾ ಪಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ.