ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಚಿತ್ರಮಂದಿರಗಳು ಮುಚ್ಚಲ್ಪಟ್ಟಿರುವ ಕಾರಣ ಮಲ್ಟಿಪ್ಲೆಕ್ಸ್ ಸೇವಾದಾರ ಪಿವಿಆರ್‌ಗೆ ಪ್ರಸಕ್ತ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ 49 ಕೋಟಿ ರೂ.ಗಳ ನಷ್ಟವಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ 49 ಕೋಟಿ ನಷ್ಟ ಕಂಡಿರುವ ಪಿವಿಆರ್, ಸೆಪ್ಟೆಂಬರ್ 30ಕ್ಕೆ ಅಂತ್ಯವಾದ ಅದರ ಹಿಂದಿನ ತ್ರೈಮಾಸಿಕದಲ್ಲಿ 184 ಕೋಟಿ ರೂ.ಗಳ ನಷ್ಟ ಅನುಭವಿಸಿತ್ತು. 2019-20ರ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದೇ ಪಿವಿಆರ್ 36 ಕೋಟಿ ರೂ.ಗಳ ಲಾಭ ಗಳಿಸಿತ್ತು.
ಸರ್ಕಾರದ ಅನ್‌ಲಾಕ್ ಪ್ರಕ್ರಿಯೆಯ ಭಾಗವಾಗಿ ಪಿವಿಆರ್ ತನ್ನ ಮಲ್ಟಿಪ್ಲೆಕ್ಸ್‌ಗಳನ್ನು ಮತ್ತೆ ಆರಂಭಿಸಿತ್ತು. ಜನವರಿ 15ಕ್ಕೆ ಅನ್ವಯವಾಗುವಂತೆ, ದೇಶಾದ್ಯಂತ ಇರುವ ತನ್ನ 13 ಸಿನೆಮಾಗಳ 56 ಸ್ಕ್ರೀನ್‌ಗಳು ಇನ್ನೂ ಮರು ಆರಂಭವಾಗಬೇಕಿದೆ ಎಂದು ಪಿವಿಆರ್ ತಿಳಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಸಿನೆಮಾಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮ ಆರಂಭಗೊಂಡಿರುವ ಕಾರಣದಿಂದ ಮುಂಬರುವ ದಿನಗಳಲ್ಲಿ ಸಿನೆಮಾಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದು, ಪರಿಸ್ಥಿತಿ ಸುಧಾರಿಸಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.