ಕೊರೊನಾ ಮಹಾಮಾರಿ ಮಧ್ಯೆ ಬ್ಯಾಂಕ್ ಗಳು ಅನೇಕ ಸೇವೆಗಳನ್ನು ಆನ್ಲೈನ್ ಮಾಡಿವೆ. ಹಾಗಾಗಿ ಸಣ್ಣಪುಟ್ಟ ಕೆಲಸಗಳಿಗೆ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಬ್ಯಾಂಕ್ ಕೆಲಸವನ್ನು ಮಾಡಬಹುದು. ನಿಮ್ಮ ಖಾತೆ ಸರ್ಕಾರಿ ಬ್ಯಾಂಕ್ ನಲ್ಲಿದ್ದರೆ ನಿಮಗೆ ಮತ್ತಷ್ಟು ಸೌಲಭ್ಯ ಸಿಗಲಿದೆ. ಬ್ಯಾಂಕೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ.
ಬಹುತೇಕ ಎಲ್ಲಾ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಜಂಟಿಯಾಗಿ ಗ್ರಾಹಕರಿಗೆ ಎಲ್ಲಾ ರೀತಿಯ ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳನ್ನು ಮನೆ ಬಾಗಿಲಿಗೆ ನೀಡ್ತಿವೆ. ಬ್ಯಾಂಕುಗಳು ಅಟ್ಯಾಟಿ ಟೆಕ್ನಾಲಜೀಸ್ ಮತ್ತು ಇಂಟಿಗ್ರಾ ಮೈಕ್ರೋಸಿಸ್ಟಮ್ ಜೊತೆಗೆ ಮನೆ ಬಾಗಿಲಿನ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ 100 ಮುಖ್ಯ ಕೇಂದ್ರಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಸಾಲ ಪಡೆದವರಿಗೆ ಸಿಹಿ ಸುದ್ದಿ: ಸರ್ಕಾರದಿಂದಲೇ ಬಡ್ಡಿ ಪಾವತಿ, 3 ತಿಂಗಳು ಕಂತು ವಿಸ್ತರಣೆ
ಗ್ರಾಹಕರು ನಗದು ವಿತ್ ಡ್ರಾ ಸೇವೆಯನ್ನು ಬಯಸಿದರೆ ಡಿಎಸ್ಪಿ ಅಪ್ಲಿಕೇಶನ್ ಅಥವಾ ವೆಬ್ ಪೋರ್ಟಲ್ ಅಥವಾ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕಿನ ಡೆಬಿಟ್ ಕಾರ್ಡ್ ಮೂಲಕವೂ ಹಣವನ್ನು ಹಿಂಪಡೆಯಬಹುದು. ಈ ಸೇವೆಗಾಗಿ ಅರ್ಜಿ ಸಲ್ಲಿಸಿದಾಗ, ಏಜೆಂಟ್ ಮೈಕ್ರೊ-ಎಟಿಎಂನೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಅದರ ಮೂಲಕ ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಈ ಸೌಲಭ್ಯದ ಮೂಲಕ ನೀವು ಕನಿಷ್ಟ 1000 ರೂಪಾಯಿ ಮತ್ತು ಗರಿಷ್ಠ 10,000 ರೂಪಾಯಿ ಹಣವನ್ನು ಹಿಂಪಡೆಯಬಹುದು.