alex Certify PUBG ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್

ಚೀನೀ ಕಿರು ತಂತ್ರಾಂಶಗಳನ್ನು ನಿಷೇಧ ಮಾಡಿದ ಮೇಲೆ ಭಾರೀ ನಿರಾಶರಾಗಿರುವ ಪಬ್‌ಜೀ ಪ್ರಿಯರಿಗೆ ಗುಡ್ ನ್ಯೂಸ್…! ಭಾರತದಲ್ಲಿ ತನ್ನ ಪಬ್‌ಜೀ ಮೊಬೈಲ್ ಇಂಡಿಯಾ ಸೇವೆಗಳನ್ನು ಬಿಡುಗಡೆ ಮಾಡಲು ಪಬ್‌ಜೀ ಕಾರ್ಪೋರೇಶನ್ ಸಿದ್ಧತೆ ನಡೆಸಿದೆ.

ಈ ಮೂಲಕ ಭಾರೀ ಜನಪ್ರಿಯವಾಗಿರುವ ಈ ಗೇಮ್ ಭಾರತಕ್ಕೆ ಮರಳಲಿದೆ. ಈ ಗೇಮ್ ‌ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನ ಪೂರ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ತನ್ನ TapTap‌ ಆಪ್‌ ಮೂಲಕ ಈ ಪೂರ್ವ ನೋಂದಣಿಯ ಪ್ರಕ್ರಿಯೆಯಲ್ಲಿ ಗೇಮಿಂಗ್ ಪ್ರಿಯರು ಭಾಗಿಯಾಗಬಹುದಾಗಿದೆ.

TapTap‌ ಜಾಲತಾಣಕ್ಕೆ ಭೇಟಿ ಕೊಟ್ಟು, ಅಲ್ಲಿರುವ ಎಪಿಕೆ ಲಿಂಕ್‌ ಮೇಲೆ ಕ್ಲಿಕ್ ಮಾಡುವ ಮೂಲಕ TapTap‌ ಕಿರು ತಂತ್ರಾಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಮೂಲಕ ನಿಮ್ಮ ಹೆಸರಿನಲ್ಲಿ ಹೊಸ ಖಾತೆ ತೆರೆದು, ಪಬ್‌ಜೀ ಮೊಬೈಲ್ ಇಂಡಿಯಾ ಎಂದು ಸರ್ಚ್ ಮಾಡಿಕೊಂಡು, ಅಲ್ಲಿ ಪೂರ್ವ ನೋಂದಣಿ ಪ್ರಕ್ರಿಯೆಯನ್ನು ಮುಗಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...