ನವದೆಹಲಿ: 6 ಕೋಟಿ ರೂಪಾಯಿ ಬಹುಮಾನದ ಸ್ಪರ್ಧೆಯೊಂದಿಗೆ ಜನಪ್ರಿಯ ಮೊಬೈಲ್ ಗೇಮ್ ಪಬ್ಜಿ ಹೊಸ ರೂಪದಲ್ಲಿ ಡಿಸೆಂಬರ್ ವೇಳೆಗೆ ಭಾರತಕ್ಕೆ ಮರಳುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪಬ್ಜಿ ಗೇಮ್ ಭರ್ಜರಿ ಪ್ರವೇಶಕ್ಕಾಗಿ 6 ಕೋಟಿ ರೂಪಾಯಿ ಮೊತ್ತದ ಬಹುಮಾನದ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂಬ ಬಗ್ಗೆ ಚರ್ಚೆ ನಡೆದಿದೆ. ವೃತ್ತಿಪರ ಪಬ್ಜಿ ಆಟಗಾರರಿಗೆ 40 ಸಾವಿರ ರೂ.ನಿಂದ ಎರಡು ಲಕ್ಷ ರೂಪಾಯಿವರೆಗೆ ಕಂಪನಿಯಿಂದ ನೀಡುವ ಕುರಿತು ಚರ್ಚೆ ನಡೆದಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಇ – ಸ್ಫೋರ್ಟ್ಸ್ ಹೆಸರಿನಲ್ಲಿ 6 ಕೋಟಿ ರೂಪಾಯಿ ಮೊತ್ತದ ಬಹುಮಾನ ಇರುವ ಸ್ಪರ್ಧೆ ಸೃಷ್ಟಿಸಲು ಪಬ್ಜಿ ಮುಂದಾಗಿದ್ದು, ಪಬ್ಜಿ ಇಂಡಿಯಾ ಆವೃತ್ತಿ ಪಡೆದುಕೊಳ್ಳಲು ಎರಡು ಲಕ್ಷಕ್ಕೂ ಅಧಿಕ ಮಂದಿ ಮುಂಗಡ ನೋಂದಣಿ ಮಾಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಯತ್ನದ ಆರೋಪದ ಮೇಲೆ ಕಳೆದ ಸೆಪ್ಟೆಂಬರ್ ನನಲ್ಲಿ ಪಬ್ಜಿ ಗೇಮ್ ಬ್ಯಾನ್ ಮಾಡಲಾಗಿತ್ತು. ಈಗ ಹೊಸ ರೂಪದೊಂದಿಗೆ ಬರಲಿ. ಭರ್ಜರಿ ರೀಎಂಟ್ರಿಗಾಗಿ 6 ಕೋಟಿ ರೂ. ಬಹುಮಾನದ ಸ್ಪರ್ಧೆ ಆಯೋಜಿಸಲಾಗುವುದು ಎಂದೆಲ್ಲಾ ಹೇಳಲಾಗಿದೆ.