ನವದೆಹಲಿ: ದೇಶದ ಐಕ್ಯತೆ, ಭದ್ರತೆಗೆ ಧಕ್ಕೆ ತರುವ ಆರೋಪದ ಮೇಲೆ ಭಾರತದಲ್ಲಿ 2019 ರ ಸೆಪ್ಟೆಂಬರ್ ನಲ್ಲಿ ನಿಷೇಧವಾಗಿರುವ ಪಬ್ಜಿ ಮತ್ತೆ ದೇಶದ ಮೊಬೈಲ್ ಗಳಲ್ಲಿ ಸ್ಥಾನ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದೆ.
ಪಬ್ಜಿ ನಿರ್ಮಾತೃ ಪ್ರಸಿದ್ಧ ಮೊಬೈಲ್ ಗೇಮಿಂಗ್ ಕಂಪನಿ ಕರಫ್ಟನ್ ಐಎ.ನ್.ಸಿ. ಭಾರತೀಯ ಮೂಲದವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಭಾರತ ಸರ್ಕಾರದ ಜತೆ ಹಲವು ಹಂತಗಳಲ್ಲಿ ಒಪ್ಪಿಗೆ ಪಡೆಯಲು ಯತ್ನಿಸುತ್ತಿದೆ.
ವಿಶುವಲ್ ಕಂಟೆಂಟ್ ಡಿಸಿಎ ಆಗಿ ಆಕಾಶ ಜುಂಬೆ, ಫೈನಾನ್ಸ್ ಮ್ಯಾನೇಜರ್ ಆಗಿ ಪಿಯೂಶ್ ಅಗರವಾಲ್, ಹಿರಿಯ ಸಾಮುದಾಯಿಕ ಪ್ರಬಂಧಕಿಯಾಗಿ ಅರ್ಪಿತಾ ಪ್ರಿಯದರ್ಶಿನಿ, ಹಿರಿಯ ಇ-ಸ್ಪೋಟ್ಸ್ ಮ್ಯಾನೇಜರ್ ಆಗಿ ಕರಣ್ ಪಥಕ್, ಅನೀಶ್ ಅರವಿಂದ ಕಂಟ್ರಿ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ.