ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಬ್ಯಾಂಕ್ ಸಿಬ್ಬಂದಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್ ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ವೇತನವನ್ನು ನೀಡುತ್ತಿದೆ. ಕೆನರಾ ಬ್ಯಾಂಕ್ ಈಗಾಗಲೇ ಇದನ್ನು ಜಾರಿಗೆ ತಂದಿದೆ. ಈ ವಾರ, ಕೆನರಾ ಬ್ಯಾಂಕ್ ಉದ್ಯೋಗಿಗಳಿಗೆ ಪ್ರೋತ್ಸಾಹಕವಾಗಿ 15 ದಿನಗಳ ಸಂಬಳ ನೀಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನೌಕರರ ಲಿಂಕ್ಡ್ ಇನ್ಸೆಂಟಿವ್ ಅಡಿಯಲ್ಲಿ ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕರರು ಬ್ಯಾಂಕಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರೋತ್ಸಾಹ ಧನ ಪಡೆಯುತ್ತಾರೆ. ವರದಿಯ ಪ್ರಕಾರ, ಕೆನರಾ ಬ್ಯಾಂಕ್ ಅಲ್ಲದೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ 165 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದ ನಂತ್ರ ಉದ್ಯೋಗಿಗಳಿಗೆ ಪಿಎಲ್ಐ ನೀಡಿದೆ. ಈ ಪಿಎಲ್ಐ ಎಲ್ಲಾ ಶ್ರೇಣಿ ಮತ್ತು ಹುದ್ದೆಯ ನೌಕರರಿಗೆ ಅನ್ವಯಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಾರ್ಚ್ ತ್ರೈಮಾಸಿಕದ ಫಲಿತಾಂಶಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಮಾರ್ಚ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಎಸ್‌ಬಿಐನ ಲಾಭವು ಸುಮಾರು ಶೇಕಡಾ 80 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 3,580.8 ಕೋಟಿ ರೂಪಾಯಿಯಿದ್ದ ಲಾಭ ಈ ಬಾರಿ 6,450.7 ಕೋಟಿ ರೂಪಾಯಿಗೆ ಏರಿದೆ. ಈ ಬ್ಯಾಂಕ್ ನೌಕರರು ಕೂಡ ಪ್ರೋತ್ಸಾಹ ಧನದ ನಿರೀಕ್ಷೆಯಲ್ಲಿದ್ದಾರೆ.