alex Certify ಮಹಿಳೆಯರಿಗೆ ಗುಡ್ ನ್ಯೂಸ್: ಆಸ್ತಿ ನೋಂದಣಿಗೆ ಜಂಟಿ ಖಾತೆಗೆ ಸರ್ಕಾರದ ಮಹತ್ವದ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಗುಡ್ ನ್ಯೂಸ್: ಆಸ್ತಿ ನೋಂದಣಿಗೆ ಜಂಟಿ ಖಾತೆಗೆ ಸರ್ಕಾರದ ಮಹತ್ವದ ಚಿಂತನೆ

ಬೆಂಗಳೂರು: ಆಸ್ತಿ ನೋಂದಣಿಯಲ್ಲಿ ಮಹಿಳಾ ಪರ ಕಾಳಜಿ ತೋರಿದ ಸರ್ಕಾರ ದಂಪತಿ ಹೆಸರಲ್ಲಿ ಜಂಟಿ ಖಾತೆ ಮಾಡಿಕೊಡಲು ಚಿಂತನೆ ನಡೆಸಿದೆ.

ಇನ್ನು ಮುಂದೆ ಆಸ್ತಿ ನೋಂದಣಿ ಸಂದರ್ಭದಲ್ಲಿ ಗಂಡ, ಹೆಂಡತಿ ಇಬ್ಬರ ಹೆಸರಿನಲ್ಲಿಯೂ ಆಸ್ತಿ ನೋಂದಾಯಿಸಿ ಜಂಟಿ ಖಾತೆ ಮಾಡಿಕೊಡುವ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿ ಕುರಿತ ನೀತಿ ಆಯೋಗದ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಇಂತಹುದೊಂದು ಸಲಹೆ ನೀಡಿದ್ದು, ಇದಕ್ಕೆ ಸಿಎಂ ಯಡಿಯೂರಪ್ಪ ದಂಪತಿಯಲ್ಲಿ ಮಾಡಿಕೊಡುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ, ಇದನ್ನು ಕಡ್ಡಾಯ ಮಾಡಲಾಗುವುದಿಲ್ಲ. ಪತಿ, ಪತ್ನಿ ಹೆಸರಲ್ಲಿ ಜಂಟಿ ನೋಂದಣಿ ಮಾಡಿಸಿಕೊಂಡರೆ ಅಂತಹ ಕುಟುಂಬಗಳಿಗೆ ಕೆಲವು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...