
ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಅವಧಿ ವಿಸ್ತರಿಸಲಾಗಿದೆ.
ತೆರಿಗೆ ಪಾವತಿಗೆ ನೀಡುತ್ತಿದ್ದ ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೂನ್ 30 ರವರೆಗೆ ವಿನಾಯಿತಿ ಅವಕಾಶ ಪಡೆದು ತೆರಿಗೆ ಪಾವತಿಸಬಹುದಾಗಿದೆ. ಏಪ್ರಿಲ್ ನಲ್ಲಿ ಶೇಕಡ 5 ರಷ್ಟು ರಿಯಾಯಿತಿ ಅವಧಿ ನೀಡಲಾಗುತ್ತಿತ್ತು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿದ್ದ ವಿನಾಯಿತಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ.