ಆಸ್ತಿ ಹಂಚಿಕೆ ವೇಳೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಆಸ್ತಿ ಹಂಚಿಕೆ ವೇಳೆ ಬಹುತೇಕ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಾರೆ. ಆಸ್ತಿ ಹಕ್ಕಿನ ಬಗ್ಗೆ ಎಲ್ಲ ಮಹಿಳೆಯರು ತಿಳಿಯುವ ಅಗತ್ಯವಿದೆ.
ತಂದೆ-ತಾಯಿ ವಿಲ್ ಮಾಡಿದ್ದರೆ ಮದುವೆ ನಂತ್ರ ಅದರ ನಕಲನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಸಹೋದರರ ಜೊತೆ ವಿವಾದ ತಪ್ಪಿಸಲು ಇದು ಅಗತ್ಯ. ಒಂದು ವೇಳೆ ಪಾಲಕರು ವಿಲ್ ಬರೆದಿಲ್ಲವೆಂದಾದ್ರೆ ಆಸ್ತಿ ಬಗ್ಗೆ ಮಾಹಿತಿ ಇರಲಿ. ಆಸ್ತಿ ದಾಖಲೆಗಳ ನಕಲನ್ನು ಪಡೆಯಿರಿ. ಹಾಗೆ ತಂದೆ-ತಾಯಿ ಆಸ್ತಿಯಲ್ಲಿ ನಿಮಗೂ ಹಕ್ಕಿದೆ ಎಂಬುದು ತಿಳಿದಿರಲಿ.
ಪೂರ್ವಜರ ಆಸ್ತಿಯ ದಾಖಲೆ ಇರಲಿ, ಇಲ್ಲದಿರಲಿ ನೀವು ಆ ಆಸ್ತಿ ಮೇಲೆ ಹಕ್ಕು ಹೊಂದಿರುತ್ತೀರಿ. ನಿಮ್ಮ ತಂದೆ-ತಾಯಿ ಇರಲಿ, ಬಿಡಲಿ, ನಿಮಗೆ ಮದುವೆಯಾಗಿರಲಿ, ಬಿಡಲಿ, ನೀವು ಪೂರ್ವಜರ ಆಸ್ತಿ ಮೇಲೆ ಹಕ್ಕು ಹೊಂದಿರುತ್ತೀರಿ ಎಂಬುದು ನಿಮಗೆ ತಿಳಿದಿರಲಿ.
ನೀವು ಖರೀದಿಸಿದ ಆಸ್ತಿ ನಿಮ್ಮದಾಗಿರುತ್ತದೆ. ಮದುವೆಗೆ ಮೊದಲು ನೀವು ಖರೀದಿ ಮಾಡಿದ ಆಸ್ತಿ ಮೇಲೆ ನಿಮಗೆ ಸಂಪೂರ್ಣ ಹಕ್ಕಿರುತ್ತದೆ. ಅದನ್ನು ನೀವು ಬೇರೆಯವರಿಗೆ ಮಾರಾಟ ಮಾಡಬಹುದು.
ಆಸ್ತಿ ಖರೀದಿಸಲು ನೀವು ಹಣ ನೀಡಿದ್ದರೆ ಅದ್ರಲ್ಲೂ ನಿಮಗೆ ಹಕ್ಕಿದೆ. ಆಸ್ತಿ ನಿಮ್ಮ ಪತಿ ಅಥವಾ ಮಕ್ಕಳ ಹೆಸರಿನಲ್ಲಿದ್ದು, ಆ ಆಸ್ತಿ ಖರೀದಿಗೆ ನೀವು ಹಣ ನೀಡಿದ್ದರೆ, ಅದ್ರ ದಾಖಲೆಯನ್ನು ಕೋರ್ಟ್ ಗೆ ತೋರಿಸಿ ನಿಮ್ಮ ಹಕ್ಕನ್ನು ಪಡೆಯಬಹುದು.
ಪತ್ನಿ ಹೆಸರಿನಲ್ಲಿ ಪತಿ ಆಸ್ತಿ ಖರೀದಿ ಮಾಡಿದ್ದರೆ, ಆ ಆಸ್ತಿ ಹಕ್ಕು ಪತ್ನಿಗಿರುತ್ತದೆ. ಆಸ್ತಿ ಖರೀದಿಗೆ ಪತಿ ಸಂಪೂರ್ಣ ಹಣ ನೀಡಿದ್ದರೂ ಪತ್ನಿಗೆ ಹಕ್ಕಿರುತ್ತದೆ.
ದಂಪತಿ ಮಧ್ಯೆ ಜಗಳವಾಗಿ ಪತಿ ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಬಹುದು. ಆದರೆ ಮನೆಯಿಂದ ಹೊರಬರಬೇಡಿ. ಪತಿ ಮನೆಯಲ್ಲಿರುವ ಸಂಪೂರ್ಣ ಹಕ್ಕು ನಿಮಗಿದೆ. ಪತಿ ಮನೆ, ಪತಿ ಹೆಸರಿನಲ್ಲಿರಲಿ ಇಲ್ಲ ಕುಟುಂಬಸ್ಥರ ಹೆಸರಿನಲ್ಲಿರಲಿ, ನೀವು ಅಲ್ಲಿರಲು ಸಂಪೂರ್ಣ ಅಧಿಕಾರ ಪಡೆದಿರುತ್ತೀರಿ.