ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬೆಲೆ ಏರಿಕೆಯ ಬರೆ ಬೀಳಲಿದೆ. ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತು, ಧಾನ್ಯ, ಅಡುಗೆ ಎಣ್ಣೆ, ತರಕಾರಿ ಮೊದಲಾದವುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.
ಹೊಸವರ್ಷಕ್ಕೆ ಹೊಸ ಬಟ್ಟೆ, ಮೊಬೈಲ್, ಟಿವಿ ರೆಫ್ರಿಜರೇಟರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಉತ್ಪಾದನೆ ವೆಚ್ಚ ಹೆಚ್ಚಳದ ಕಾರಣದಿಂದಾಗಿ ಇವುಗಳ ದರ ಏರಿಕೆಯಾಗಲಿದೆ.
ಅತಿವೃಷ್ಟಿ, ಪ್ರವಾಹ, ಅಕಾಲಿಕ ಮಳೆ ಮೊದಲಾದವುಗಳ ಕಾರಣದಿಂದಾಗಿ ತರಕಾರಿ, ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿದೆ. ಉಕ್ಕು, ಸಿಮೆಂಟ್ ದರ ಕೂಡ ಏರಿಕೆಯಾಗಿದೆ. ಈಗಾಗಲೇ ಮೊಬೈಲ್ ಕರೆ ದರ, ಡೇಟಾ ದರ ದುಬಾರಿಯಾಗಿವೆ. ಸ್ಮಾರ್ಟ್ಫೋನ್, ರೆಫ್ರಿಜರೇಟರ್, ಬಟ್ಟೆ ಡಿಸೆಂಬರ್ ನಲ್ಲಿ ಶೇಕಡ 6 ರಷ್ಟು, ಜನವರಿ- ಫೆಬ್ರವರಿಯಲ್ಲಿ 10 ರಿಂದ 12 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಅನೇಕ ವಸ್ತುಗಳ ದರ ಏರಿಕೆಯಾಗಿದ್ದು, ಮತ್ತೊಮ್ಮೆ ದರ ಹೆಚ್ಚಳ ಗ್ರಾಹಕರಿಗೆ ವರ್ಗಾವಣೆಯಾಗಲಿದೆ.