ಹೊಸ ವರ್ಷದ ಆರಂಭದಲ್ಲಿ ಟಿವಿ ಖರೀದಿ ಮಾಡ್ಬೇಕೆಂಬ ಪ್ಲಾನ್ ನಲ್ಲಿದ್ದವರಿಗೆ ಬೇಸರದ ಸಂಗತಿಯಿದೆ. ಟಿವಿ ಬೆಲೆಯಲ್ಲಿ ಏರಿಕೆಯಾಗಲಿದೆ. ಈ ತ್ರೈಮಾಸಿಕದಲ್ಲಿ ಟಿವಿ ಬೆಲೆ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲಾದ ಕೆಲ ಬದಲಾವಣೆಗಳು ಟಿವಿ ಬೆಲೆ ಏರಿಕೆಗೆ ಕಾರಣವಾಗಲಿದೆ.
ಶಿಯೋಮಿ, ಸ್ಯಾಮ್ಸಂಗ್ ಮತ್ತು ಒನ್ ಪ್ಲಸ್ ನಂತಹ ಬ್ರಾಂಡ್ ಗಳು ಈಗಾಗಲೇ ಭಾರತದಲ್ಲಿ ಟಿವಿ ಬೆಲೆಯನ್ನು ಏರಿಕೆ ಮಾಡಿವೆ. ಈ ಕಂಪನಿ ಟಿವಿ ಬೆಲೆ ಶೇಕಡಾ 10ರಿಂದ 15ರಷ್ಟು ಹೆಚ್ಚಾಗಿದೆ. ಓಪನ್ ಸೇಲ್ ಪ್ಯಾನಲನ್ನು ವಿಶ್ವದಾದ್ಯಂತ ಟಿವಿ ತಯಾರಕರು ಬಳಸುತ್ತಿದ್ದಾರೆ. ಇದು ಟಿವಿ ಬೆಲೆ ಏರಿಕೆಗೆ ಕಾರಣ ಎನ್ನಲಾಗ್ತಿದೆ.
ಅಮೆರಿಕಾ-ಚೀನಾ, ಚೀನಾ-ಭಾರತದ ಮಧ್ಯೆಯಿರುವ ರಾಜಕೀಯ ಉದ್ವಿಗ್ನತೆಯೂ ಟಿವಿ ಬೆಲೆ ಹೆಚ್ಚಳಕ್ಕೆ ಕಾರಣವಾಗ್ತಿದೆ ಎಂದು ಟೆಲಿವಿಷನ್ ಕಂಪನಿ ಸಂಸ್ಥಾಪಕರೊಬ್ಬರು ಹೇಳಿದ್ದಾರೆ. ಇತರ ವೆಚ್ಚಗಳ ಹೆಚ್ಚಳ, ವಿಶೇಷವಾಗಿ ಸರಕು-ಸಾಗಣೆ ಶುಲ್ಕ ಏರಿಕೆ, ತಾಮ್ರ, ಅಲ್ಯೂಮಿನಿಯಂ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕೂಡ ಟಿವಿ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿದೆ. ಟಿವಿ ಬೆಲೆ ಹೆಚ್ಚಳ ಟಿವಿ ಬೇಡಿಕೆ ಮೇಲೆ ಪ್ರಭಾವ ಬೀರಲಿದೆ. ಹಿಂದಿನ ವರ್ಷ ಅನೇಕ ಕಾರಣಗಳಿಂದಾಗಿ ಟಿವಿ ಬೇಡಿಕೆ ಹೆಚ್ಚಾಗಿತ್ತು. ದೊಡ್ಡ ಸ್ಕ್ರೀನ್ ಟಿವಿ ಮೇಲೆ ಗ್ರಾಹಕರು ಒಲವು ತೋರಿದ್ದರು.