alex Certify SHOCKING: ಅಗತ್ಯ ವಸ್ತುಗಳ ಬೆನ್ನಲ್ಲೇ ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಅಗತ್ಯ ವಸ್ತುಗಳ ಬೆನ್ನಲ್ಲೇ ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ

ನವದೆಹಲಿ: ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ.

ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ NLEM ನಲ್ಲಿ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ 10.7 ರಷ್ಟು ಏರಿಕೆಯಾಗುತ್ತವೆ.

ಔಷಧಗಳ(ಬೆಲೆ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಇದನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

NLEM ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಅಗತ್ಯ ಔಷಧಗಳನ್ನು ಒಳಗೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...