alex Certify ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ; ಕಳೆದ 30 ದಿನಗಳಲ್ಲಿ 10 ರೂ. ಕಡಿಮೆಯಾದ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ; ಕಳೆದ 30 ದಿನಗಳಲ್ಲಿ 10 ರೂ. ಕಡಿಮೆಯಾದ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ

ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8-10 ರೂ.ನಷ್ಟು ಕಡಿಮೆಯಾಗಿದೆ.

ಮುಂಬರುವ ತಿಂಗಳುಗಳಲ್ಲಿ ತೈಲಬೀಜಗಳ ಹೆಚ್ಚಿನ ದೇಶೀಯ ಉತ್ಪಾದನೆ ಮತ್ತು ಇತರೆ ಕಾರಣಗಳಿಂದಾಗಿ 3-4 ರೂ.ನಷ್ಟು ಇಳಿಯಬಹುದು. ಕಳೆದ ಕೆಲವು ತಿಂಗಳು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಸೇರಿ ಎಲ್ಲಾ ಖಾದ್ಯ ತೈಲಗಳ ಏರಿಕೆಯಾಗಿತ್ತು. ಅಂತರಾಷ್ಟ್ರೀಯ ಬೆಲೆಗಳ ಕಾರಣದಿಂದಾಗಿ ಭಾರತೀಯ ಖಾದ್ಯ ತೈಲ ಗ್ರಾಹಕರು ಹೆಚ್ಚಾಗಿ ತೊಂದರೆ ಗೀಡಾಗಿದ್ದಾರೆ ಎಂದು ಸಾಲ್ವೆಂಟ್ ಎಕ್ಸ್‌ ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ(ಎಸ್‌ಇಎ) ಅಧ್ಯಕ್ಷ ಅತುಲ್ ಚತುರ್ವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SEA ತನ್ನ ಸದಸ್ಯರಿಗೆ ದೀಪಾವಳಿಯ ಮೊದಲು ಬೆಲೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸಲಹೆ ನೀಡಿತ್ತು, ಕೇಂದ್ರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತ್ತು. ಈ ಎಲ್ಲಾ ಕ್ರಮಗಳ ಪರಿಣಾಮವಾಗಿ ಕಳೆದ 30 ದಿನಗಳಲ್ಲಿ ಖಾದ್ಯ ತೈಲ ಬೆಲೆಗಳು ಕೆಜಿಗೆ ಸುಮಾರು 8-10 ರೂ.ಗಳಷ್ಟು ಕಡಿಮೆಯಾಗಿದೆ ಎಂದು ಚತುರ್ವೇದಿ ಹೇಳಿದ್ದಾರೆ.

ಕಡಿಮೆ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ಸದಸ್ಯರು ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದಾರೆ ಎಂದು SEA ಹೇಳಿದೆ. ಮುಂದೆ ಪ್ರತಿ ಖಾದ್ಯ ತೈಲ ದರ ಕೆಜಿಗೆ ಸುಮಾರು 3-4 ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಇದರಿಂದ ಖಾದ್ಯ ತೈಲ ಗ್ರಾಹಕರಿಗೆ ಅನುಕೂಲವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...