ನವದೆಹಲಿ: ಕಳೆದ 15 ದಿನಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 1.65 ರೂ. ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಅಂತರಾಷ್ಟ್ರೀಯ ದರಗಳು ಏರಿಳಿತವಾಗದ ಕಾರಣ ಪೆಟ್ರೋಲ್ ಬೆಲೆಯನ್ನು ಸುಮಾರು ಒಂದು ಡಜನ್ ಬಾರಿ ಪರಿಷ್ಕರಿಸಲಾಗಿದೆ. ಕಚ್ಚಾತೈಲ ಬೆಲೆ ಬ್ಯಾರೆಲ್ ಗೆ 45.4 ರಿಂದ 45.9 ಡಾಲರ್ ನಡುವೆ ಉಳಿದ ಕಾರಣ ಬೆಲೆ ಪರಿಷ್ಕರಣೆ ನಡೆದಿದೆ.
ಆಗಸ್ಟ್ 16 ರಿಂದ ಚಿಲ್ಲರೆ ಇಂಧನ ದರ ಪರಿಷ್ಕರಣೆ ಆರಂಭವಾಗಿದ್ದು ಪೆಟ್ರೋಲ್ ದರ ಏರುಗತಿಯಲ್ಲಿ ಸಾಗಿ 82.08 ರೂ.ಗೆ ಏರಿಕೆಯಾಗಿದೆ. 15 ದಿನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 1.65 ರೂ.ನಷ್ಟು ದುಬಾರಿಯಾಗಿದೆ.
ಆಗಸ್ಟ್ 16 ರಿಂದ ಬೆಲೆ ಏರಿಕೆ ಆರಂಭವಾಗಿ 15 ದಿನದ ಅವಧಿಯಲ್ಲಿ ಪೆಟ್ರೋಲ್ ಬೆಲೆಯನ್ನು ಒಂದು ಡಜನ್ ಬಾರಿ ಪರಿಷ್ಕರಿಸಲಾಗಿದೆ. ಅಂತರರಾಷ್ಟ್ರೀಯ ದರಗಳು ಹೆಚ್ಚು ಏರಿಳಿತತವಾಗಿಲ್ಲ. ದೇಶದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಯೊಂದಿಗೆ ಸಂಬಂಧ ಹೊಂದಿವೆ. ಅವು ಅನಿಯಂತ್ರಿತ ಉತ್ಪನ್ನಗಳಾಗಿರುವುದರಿಂದ ದೈನಂದಿನ ಪರಿಷ್ಕರಣೆಯಲ್ಲಿ ಸರ್ಕಾರದ ಯಾವುದೇ ಪಾತ್ರ ವಿರುವುದಿಲ್ಲ ಎಂದು ತೈಲ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.