ನವದೆಹಲಿ: ಕೇಂದ್ರ ಸರ್ಕಾರ ಅಗತ್ಯ ಔಷಧಗಳ ಧರಣಿಕೆಗೆ ಕ್ರಮ ಕೈಗೊಂಡಿದ್ದು, 651 ಅಗತ್ಯ ಔಷಧಗಳ ದರ ಸರಾಸರಿ ಶೇಕಡ 6.73 ರಷ್ಟು ಇಳಿಕೆಯಾಗಿದೆ.
ಅನುಸೂಚಿತ ಔಷಧಗಳ ಗರಿಷ್ಠ ದರ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದರ ಮಿತಿ ನಿಗದಿ ಮಾಡಿದೆ. ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ ಪಟ್ಟಿಯಲ್ಲಿರುವ 870 ಅನುಸೂಚಿತ ಔಷಧಗಳಲ್ಲಿ ಇದುವರೆಗೆ 651 ಔಷಧಿಗಳ ಗರಿಷ್ಠ ದರಗಳ ಮೇಲೆ ಮಿತಿ ಹೇರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
651 ಅಗತ್ಯ ಔಷಧಿಗಳ ಬೆಲೆ ಏಪ್ರಿಲ್ 1 ರಿಂದ 6.73% ರಷ್ಟು ಕಡಿಮೆಯಾಗಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ನಿಗದಿತ ಔಷಧಿಗಳ ಬೆಲೆಗಳನ್ನು ಮಿತಿಗೊಳಿಸುವುದರಿಂದ ಫಾರ್ಮಾ ಕಂಪನಿಗಳ ಹೆಚ್ಚಳವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.