ಬೆಂಗಳೂರು: ಓಲಾ ಹಾಗೂ ಉಬರ್ ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಇವತ್ತು ಹೈಕೋರ್ಟ್ ನಲ್ಲಿ ಪ್ರಯಾಣದರ ಫೈನಲ್ ಆಗುವ ಸಾಧ್ಯತೆ ಇದೆ.
ಕಂಪನಿಗಳ ಜೊತೆ ಸಭೆ ನಡೆಸಿ ಪರಿಹಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದು, ಆದರೂ, ರಾಜ್ಯ ಸಾರಿಗೆ ಇಲಾಖೆ ಪ್ರಯಾಣದರ ನಿಗದಿ ಮಾಡಿಲ್ಲ. ಓಲಾ, ಉಬರ್, ರಾಪಿಡೋ ಕಂಪನಿಗಳ ಜೊತೆ ಇಲಾಖೆ ಸಭೆ ನಡೆಸಿತ್ತು. ಕಾಟಾಚಾರಕ್ಕೆ ಸಭೆ ನಡೆಸಿ ಸಾರಿಗೆ ಇಲಾಖೆ ಸುಮ್ಮನಾಗಿದೆ ಎಂಬ ಆರೋಪ ಕೇಳಿಬಂದಿದೆ.
15 ದಿನದೊಳಗೆ ಹೊಸ ದರ ನಿಗದಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಗಡುವು ಮುಗಿದರೂ ಸಾರಿಗೆ ಇಲಾಖೆ ದರ ನಿಗದಿ ಮಾಡಿಲ್ಲ. ಕನಿಷ್ಠ ಎರಡು ಕಿಲೋಮೀಟರ್ ಗೆ 100 ರೂಪಾಯಿ ದರ ನಿಗದಿ ಮಾಡಬೇಕೆಂದು ಕಂಪನಿಗಳು ಪಟ್ಟು ಹಿಡಿದಿವೆ. ಹೀಗಾಗಿ ಇಲಾಖೆ ಅಧಿಕಾರಿಗಳು ದರ ನಿಗದಿಗೆ ಮುಂದಾಗಿಲ್ಲ. ಹೈಕೋರ್ಟ್ ನಿರ್ಧಾರದಂತೆ ಇಂದು ದರ ನಿಗದಿ ಮಾಡುವ ಸಾಧ್ಯತೆ ಇದೆ.