ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕಚ್ಚಾವಸ್ತು ದರ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳವಾದ ಹಿನ್ನೆಲೆಯಲ್ಲಿ ಗ್ರಾಹಕ ವಸ್ತುಗಳ ದರ ಏರಿಕೆ ಕಂಪನಿಗಳು ಚಿಂತನೆ ನಡೆಸಿವೆ.
ಗೃಹೋಪಯೋಗಿ ಉಪಕರಣಗಳು, ಬಿಸ್ಕೆಟ್, ಸೌಂದರ್ಯವರ್ಧಕ ಉತ್ಪನ್ನಗಳ ದರ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಉತ್ಪಾದನೆ ವೆಚ್ಚ ಮತ್ತು ಕಚ್ಚಾ ವಸ್ತುಗಳ ದರದಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ಕಂಪನಿಗಳು ದರ ಹೆಚ್ಚಳಕ್ಕೆ ಮುಂದಾಗಿವೆ. ಈ ತ್ರೈ ಮಾಸಿಕದಲ್ಲಿ ಗ್ರಾಹಕ ವಸ್ತುಗಳ ದರಗಳು ಶೇಕಡ 5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎರಿಕ್ ಬೃಗಾಂಜಾ ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಹಲವು ವಸ್ತುಗಳ ಬೆಲೆ ಭಾರಿ ಏರಿಕೆ ಕಂಡಿದೆ. ಈಗ ಮತ್ತೆ ಕೆಲವು ವಸ್ತುಗಳ ದರ ಕೂಡ ಏರಿಕೆಯಾಗಲಿದ್ದು, ಮೊದಲೇ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿದೆ.