ನವದೆಹಲಿ: 15 ಆಹಾರ ಧಾನ್ಯಗಳ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ರಾಗಿ, ಭತ್ತ, ಜೋಳ, ಮೆಕ್ಕೆಜೋಳ, ಶೇಂಗಾ, ಹತ್ತಿ, ತೊಗರಿ, ಉದ್ದು, ಹೆಸರು ಸೇರಿದಂತೆ 15 ಧಾನ್ಯಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ.
ಭತ್ತದ ಬೆಂಬಲ ಬೆಲೆ 143 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕ್ವಿಂಟಲ್ ಗೆ 2183 ರೂ. ದರ ನೀಡಿ ಖರೀದಿಸಲಾಗುವುದು. ಹೆಸರುಕಾಳು ಬೆಂಬಲ ಬೆಲೆ 803 ರೂಪಾಯಿ ಏರಿಕೆಯಾಗಿದ್ದು, ಕ್ವಿಂಟಲ್ ಗೆ 8558 ರೂಪಾಯಿ ದರ ನೀಡಲಾಗುವುದು. ತೊಗರಿ ಬೇಳೆ ಬೆಂಬಲ ಬೆಲೆ 400 ರೂಪಾಯಿ ಏರಿಕೆಯಾಗಿದೆ. ಕ್ವಿಂಟಲ್ 7,000 ರೂ. ದರದಲ್ಲಿ ಖರೀದಿಸಲಾಗುವುದು.
ರಾಗಿ ಬೆಂಬಲ ಬೆಲೆ 268 ರೂಪಾಯಿ ಹೆಚ್ಚಾಗಿದ್ದು, 3866 ರೂ. ದರ ನೀಡಲಾಗಿದೆ. ಮೆಕ್ಕೆಜೋಳ ದರ 128 ರೂ. ಹೆಚ್ಚಾಗಿದ್ದು 2090 ರೂಪಾಯಿ ದರ ಇದೆ. ಶೇಂಗಾ ದರ 527 ರೂ. ಹೆಚ್ಚಾಗಿದ್ದು 6377 ರೂ.ಗೆ ಖರೀದಿಸಲಾಗುವುದು. ಮಧ್ಯಮ ಹತ್ತಿ ದರ 540ರೂ., ಉದ್ದ ಹತ್ತಿ ದರ 640 ರೂ. ಹೆಚ್ಚಾಗಿದ್ದು ಕ್ರಮವಾಗಿ 6,620 ರೂ., 7020 ರೂ. ದರ ಇದೆ. ಹೈಬ್ರೀಡ್ ಜೋಳ 210 ರೂ. ಹೆಚ್ಚಳವಾಗಿದ್ದು, 2120 ರೂ. ದರ ನಿಗದಿಪಡಿಸಲಾಗಿದೆ.