ಲಾಕ್ ಡೌನ್ ನಂತ್ರ ಮೇ 25 ರಿಂದ ಆಯ್ದ ದೇಶಿ ವಿಮಾನಗಳ ಹಾರಾಟಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಕೊರೊನಾ ಹೆಸರಿನಲ್ಲಿ ವಿಮಾನ ಕಂಪನಿಗಳು ಟಿಕೆಟ್ ದರ ಹೆಚ್ಚಳ ಮಾಡದಿರಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವೇ ಕನಿಷ್ಠ ಹಾಗೂ ಗರಿಷ್ಠ ಟಿಕೆಟ್ ದರ ನಿಗದಿಪಡಿಸಿದೆ.
ಕೇಂದ್ರ ಸರ್ಕಾರ ವಿಮಾನ ದರಗಳಿಗೆ ಕ್ಯಾಪ್ ವಿಧಿಸಿದೆ. ಇದ್ರ ಪ್ರಕಾರ 40 ನಿಮಿಷದ ವಿಮಾನ ಪ್ರಯಾಣಕ್ಕೆ ಕನಿಷ್ಠ 2 ಸಾವಿರದಿಂದ ಗರಿಷ್ಠ 6 ಸಾವಿರದವರೆಗೆ ಶುಲ್ಕ ವಿಧಿಸಬಹುದು. 40 ರಿಂದ 60 ನಿಮಿಷಗಳವರೆಗಿನ ಪ್ರಯಾಣಕ್ಕೆ 2,500 ರೂಪಾಯಿಯಿಂದ ಮತ್ತು 7,500 ರೂಪಾಯವರೆಗೆ ನಿಗದಿಪಡಿಸಲಾಗಿದೆ. 60 ರಿಂದ 90 ನಿಮಿಷಗಳ ಹಾರಾಟಕ್ಕೆ ಕನಿಷ್ಠ ಶುಲ್ಕವನ್ನು 3,000 ರೂಪಾಯಿಯಿಂದ ಗರಿಷ್ಠ ಶುಲ್ಕ 9,000 ರೂಪಾಯಿಗೆ ನಿಗದಿಪಡಿಸಲಾಗಿದೆ.
90 ರಿಂದ 120 ನಿಮಿಷಗಳವರೆಗಿನ ಪ್ರಯಾಣಕ್ಕೆ ಕನಿಷ್ಠ 3,500 ರೂಪಾಯಿ ಮತ್ತು ಗರಿಷ್ಠ 10,000 ರೂಪಾಯಿ ನಿಗದಿಪಡಿಸಿದೆ. 120 ನಿಮಿಷದಿಂದ 150 ನಿಮಿಷಗಳ ಪ್ರಯಾಣಕ್ಕೆ 4,500 ರೂಪಾಯಿಯಿಂದ 13,000 ರೂಪಾಯಿ ಮತ್ತು 150 ನಿಮಿಷದಿಂದ 180 ನಿಮಿಷಗಳ ಹಾರಾಟಕ್ಕೆ ಕನಿಷ್ಠ 5,500 ರೂಪಾಯಿ ಮತ್ತು ಗರಿಷ್ಠ 15,570 ರೂಪಾಯಿ ನಿಗದಿಪಡಿಸಿದೆ.
ಈ ನಿಯಮವನ್ನು ಸರ್ಕಾರ ನವೆಂಬರ್ 24 ರವರೆಗೆ ನಿಗದಿಪಡಿಸಿತ್ತು. ಆದರೆ ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ನೂ ಮೂರು ತಿಂಗಳು ಈ ನಿಯಮ ಜಾರಿಯಲ್ಲಿರಲಿದೆ. ವಿಮಾನ ದರಗಳ ಕ್ಯಾಪ್ ಮುಂದಿನ ವರ್ಷದ ಫೆಬ್ರವರಿವರೆಗೆ ಜಾರಿಯಲ್ಲಿರಲಿದೆ.