ಹಾವೇರಿ: ಬ್ಯಾಡಗಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ 60,000 ತಲುಪಿದ್ದು, ರೈತರಿಗೆ ಬಂಪರ್ ಲಾಭ ದೊರೆಯುತ್ತಿದೆ.
ಬ್ಯಾಡಗಿಯ ಕಡ್ಡಿ ಮತ್ತು ಡಬ್ಬಿ ತಳಿಯ ಮೆಣಸಿನ ಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 60,000 ರೂ. ದರ ಇದೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಮಾರುಕಟ್ಟೆಗೆ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿದ್ದಾರೆ. ವಾರದ ಆವಕ 50,000 ಚೀಲ ದಾಟಿದೆ.
ಡಿಸೆಂಬರ್ 14ರಂದು ಗುರುವಾರ ಬೆಳಿಗ್ಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ದರ ಒಂದು ಕ್ವಿಂಟಾಲ್ ಕಡ್ಡಿ ಮೆಣಸಿನ ಕಾಯಿಗೆ 66,666 ರೂ.ಗೆ ಮಾರಾಟವಾಗಿದೆ. ಡಬ್ಬಿ ತಳಿ ಮೆಣಸಿನ ಕಾಯಿಗೆ 60,720 ರೂ.ಗೆ ಮಾರಾಟವಾಗಿದೆ.