ಪ್ರಿಪೇಯ್ಡ್ ಯೋಜನೆಯನ್ನು ಪೋಸ್ಟ್ ಪೇಯ್ಡ್ ಪ್ಲಾನ್ ಆಗಿ ಬದಲಿಸುವುದು ಇನ್ಮುಂದೆ ಸುಲಭವಾಗಲಿದೆ. ಪ್ರಿಪೇಯ್ಡ್ ಸಿಮ್ ಕಾರ್ಡನ್ನು ಪೋಸ್ಟ್ ಪೇಯ್ಡ್ ಆಗಿ ಪರಿವರ್ತಿಸಲು ಮೊಬೈಲ್ ಗ್ರಾಹಕರು ಇನ್ಮುಂದೆ ದಾಖಲೆಗಳ ಮರುಪರಿಶೀಲನೆ ಮಾಡಬೇಕಾಗಿಲ್ಲ.
ಕೇವಲ ಒಂದು ಒಟಿಪಿಯಲ್ಲಿ ನೀವು ಪ್ರಿಪೇಯ್ಡ್ ಪ್ಲಾನನ್ನು ಪೋಸ್ಟ್ ಪೇಯ್ಡ್ ಪ್ಲಾನ್ ಆಗಿ ಬದಲಿಸಬಹುದು. ದೂರ ಸಂಪರ್ಕ ಇಲಾಖೆ ಇದಕ್ಕಾಗಿಯೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ. ಮರುಪರಿಶೀಲನೆಗೆ ಗ್ರಾಹಕರು ಟೆಲಿಕಾಂ ಕಂಪನಿಗೆ ಹೋಗಬೇಕಾಗಿಲ್ಲ. ಒಂದು ಒಟಿಪಿ ಮೂಲಕ ಪ್ಲಾನ್ ಬದಲಿಸಬಹುದು.
ಗ್ರಾಹಕರ ಪರಿಶೀಲನೆಗಾಗಿ ದೂರಸಂಪರ್ಕ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಒಂದರಿಂದ ಎರಡು ವಾರಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗಲಿದೆ. ದೇಶದಲ್ಲಿ 90 ಕೋಟಿಗೂ ಹೆಚ್ಚು ಪ್ರಿಪೇಯ್ಡ್ ಮೊಬೈಲ್ ಚಂದಾದಾರರಿದ್ದಾರೆ.