ತಮ್ಮ ಬಾಕಿ ವೇತನ ಪಾವತಿ ಹಾಗೂ ಕೆಲಸದಲ್ಲಿ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ 80 ಮಂದಿ ರೇಡಿಯೋ ಜಾಕಿಗಳು ಪ್ರಸಾರ ಭಾರತಿಗೆ ಕಾನೂನಾತ್ಮಕ ನೋಟಿಸ್ ನೀಡಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಮತ್ತು ಲಾಕ್ ಡೌನ್ ಘೋಷಣೆಯಾದಾಗಿನಿಂದ 80 ಜನರಿಗೆ ವೇತನ ಪಾವತಿಯೂ ಆಗಿಲ್ಲ. ಕೆಲಸದ ಅಭದ್ರತೆಯೂ ಕಾಡುತ್ತಿತ್ತು.
ಲಾಕ್ ಡೌನ್ ಇದ್ದರೂ ವೇತನ ಕೊಡುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದರೂ ಸಂಬಳ ಕೊಟ್ಟಿಲ್ಲ. ಮೂರ್ನಾಲ್ಕು ತಿಂಗಳಿಂದ ಕೆಲಸಕ್ಕೂ ಕರೆದಿಲ್ಲ. ಇದರಿಂದ ಆತಂಕಕ್ಕೊಳಗಾದ ಆರ್.ಜೆ.ಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಸಾರ ಭಾರತಿ, ಆಕಾಶವಾಣಿಗೆ ನೋಟಿಸ್ ಕಳುಹಿಸಿದ್ದಾರೆ.