NSC, PPF ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಉಳಿತಾಯ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ನಿಮಗಾಗಿ ಒಳ್ಳೆಯ ಸುದ್ದಿ ಇದೆ.
ಜುಲೈ 1 ರಿಂದ ಈ ಯೋಜನೆಗಳು ಹೆಚ್ಚಿನ ಆದಾಯ ಪಡೆಯಲಿವೆ. ಜುಲೈ 1 ರಿಂದ ಕೇಂದ್ರ ಸರ್ಕಾರ ಉಳಿತಾಯ ಯೋಜನೆಗಳಾದ ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿಯ ಮೇಲಿನ ಬಡ್ಡಿದರವನ್ನು ಭಾರಿ ಹೆಚ್ಚಿಸಬಹುದು.
ಪ್ರತಿ ತ್ರೈಮಾಸಿಕ ಪ್ರಾರಂಭವಾಗುವ ಮೊದಲು ಹಣಕಾಸು ಸಚಿವಾಲಯ ಸರ್ಕಾರಿ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಜುಲೈ 1 ರಿಂದ ಸರ್ಕಾರದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 0.50 ರಿಂದ 0.75 ರಷ್ಟು ಹೆಚ್ಚಳದ ಬಗ್ಗೆ ಹಣಕಾಸು ಸಚಿವಾಲಯ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
RBI ರೆಪೊ ದರವನ್ನು 0.90 ಪ್ರತಿಶತದಷ್ಟು ಹೆಚ್ಚಿಸಿದ ನಂತರ, ಅನೇಕ ಬ್ಯಾಂಕುಗಳು ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ 1 ರಿಂದ ಈ ಸರ್ಕಾರಿ ಉಳಿತಾಯ ಯೋಜನೆಗಳ ಬಡ್ಡಿದರವೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಶೇ. 7.1 ರಷ್ಟು ವಾರ್ಷಿಕ ಬಡ್ಡಿ ದರ ಪಡೆಯುತ್ತದೆ. NSC ವಾರ್ಷಿಕ ಶೇ. 6.8 ಬಡ್ಡಿ ದರ ಇದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇಕಡ 7.6 ಮತ್ತು ಹಿರಿಯ ನಾಗರಿಕರ ತೆರಿಗೆ ಉಳಿತಾಯ ಯೋಜನೆಯಲ್ಲಿ ಶೇಕಡ 7.4 ಬಡ್ಡಿ ಲಭ್ಯವಿದೆ. ಇದಲ್ಲದೇ ಕಿಸಾನ್ ವಿಕಾಸ್ ಪತ್ರಕ್ಕೆ ಶೇ. 6.9 ಬಡ್ಡಿ ನೀಡಲಾಗುತ್ತಿದೆ. ಸರ್ಕಾರ ಜುಲೈನಿಂದ ಈ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.