ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ(PPF) ವಾರ್ಷಿಕ ಹೂಡಿಕೆ ಮಿತಿಯನ್ನು 1.5 ಲಕ್ಷದಿಂದ 3 ಲಕ್ಷ ರೂ.ವರೆಗೆ ಏರಿಕೆ ಮಾಡುವ ಸಾಧ್ಯತೆ ಇದೆ.
ಈ ಕುರಿತಾಗಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICAI) ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಬಜೆಟ್ ಪೂರ್ವಭಾವಿ ಸಲಹೆ ಇದಾಗಿದ್ದು, ವಾರ್ಷಿಕ ಗರಿಷ್ಠ ಮಿತಿಯನ್ನು ಕೇಂದ್ರ ಬಜೆಟ್ ನಲ್ಲಿ ಹೆಚ್ಚಳ ಮಾಡುವಂತೆ ತಿಳಿಸಲಾಗಿದೆ.
ಪಿಪಿಎಫ್ ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ಅನೇಕ ವರ್ಷಗಳಿಂದ ಇದರ ವಾರ್ಷಿಕ ಠೇವಣಿಯ ಮಿತಿ 1.5 ಲಕ್ಷ ರೂಪಾಯಿ ಇದ್ದು, ಇದನ್ನು ಏರಿಕೆ ಮಾಡುವುದು ಅವಶ್ಯಕವೆಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ಜನಪ್ರಿಯ ಸಣ್ಣ ಉಳಿತಾಯ ಯೋಜನೆಯಾಗಿರುವ ಪಿಪಿಎಫ್ ನಲ್ಲಿ ವೇತನದಾರರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ವಾರ್ಷಿಕ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ. ಪ್ರಸ್ತುತ ಶೇಕಡಾ 7.18 ಬಡ್ಡಿ ನೀಡಲಾಗುತ್ತದೆ. ಹೂಡಿಕೆ ಮಿತಿಯನ್ನು 3 ಲಕ್ಷ ರೂ.ಗೆ ಏರಿಕೆ ಮಾಡಬೇಕೆಂದು ಸಲಹೆ ನೀಡಿದ್ದು, ಬಜೆಟ್ ನಲ್ಲಿ ಇದನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.