ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವವರ ಅರ್ಹತಾ ಮಾನದಂಡಗಳಿಗೆ ಸರ್ಕಾರ ವಿನಾಯಿತಿ ನೀಡಿದೆ.
ಮಾರ್ಚ್ 25 ರಿಂದ ಜೂನ್ 30 ರವರೆಗೆ ಲಾಕ್ಡೌನ್ ಅವಧಿಯಲ್ಲಿ ಹೆಣ್ಣು ಮಗು 10 ವರ್ಷ ಪೂರ್ಣಗೊಳಿಸಿದರೆ ಅವರ ಹೆಸರಿನಲ್ಲಿ ಜುಲೈ 31 ರವರೆಗೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು.
ಲಾಕ್ಡೌನ್ ಜಾರಿ ಮಾಡಿದ ಕಾರಣ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಸಾಧ್ಯವಾಗದ ಹೆಣ್ಣುಮಕ್ಕಳ ಪೋಷಕರಿಗಾಗಿ ಅನುಕೂಲವಾಗುವಂತೆ ವಿನಾಯಿತಿ ನೀಡಲಾಗಿದೆ.
ಸುಕನ್ಯಾ ಸಮೃದ್ಧಿ ಖಾತೆಗಳನ್ನು ಹೆಣ್ಣು ಮಗು ಜನಿಸಿದ ದಿನಾಂಕದಿಂದ 10 ವರ್ಷ ವಯಸ್ಸಿನವರೆಗೆ ಮಾತ್ರ ತೆರೆಯಬಹುದಾಗಿದೆ. ಆದರೆ ಲಾಕ್ಡೌನ್ ಅವಧಿಯಲ್ಲಿ 10 ವರ್ಷ ಪೂರ್ಣಗೊಂಡಿದ್ದರೂ ಜುಲೈ 31 ರವರೆಗೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.
ಸಾರ್ವಜನಿಕ ಭವಿಷ್ಯನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ನೀಡಿದ್ದ ನಿಯಮ ಸಡಿಲಿಕೆ ಕೊನೆಯಾಗಲಿದೆ. ಅನೇಕ ಯೋಜನೆಗಳಿಗೆ ಠೇವಣಿ ವಿಸ್ತರಣೆ, ಖಾತೆ ತೆರೆಯುವ ನಿಯಮಗಳಿಗೆ ಸರ್ಕಾರ ಸಡಿಲಿಕೆ ಮಾಡಿದ್ದು ಜುಲೈ 31 ರಂದು ವಿನಾಯತಿ ಅವಧಿ ಮುಕ್ತಾಯವಾಗಲಿದೆ. 2019 -20 ರ ಹಣಕಾಸು ವರ್ಷದಲ್ಲಿ ಜುಲೈ 31 ರವರೆಗೆ ಪಿಪಿಎಫ್ ಖಾತೆದಾರರು ತಮ್ಮ ಖಾತೆಗಳಲ್ಲಿ ಠೇವಣಿ ಇಡಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದೆ.