ನವದೆಹಲಿ: ವಿದ್ಯುತ್ ಬಳಕೆಗೆ ಹಗಲು ವೇಳೆ ಶೇಕಡ 20ರಷ್ಟು ರಿಯಾಯಿತಿ ನೀಡಿ ರಾತ್ರಿ ವೇಳೆ ಶೇಕಡ 20ರಷ್ಟು ಹೆಚ್ಚು ಶುಲ್ಕ ವಿಧಿಸುವ ಹೊಸ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಎರಡು ವರ್ಷಗಳಲ್ಲಿ ಕೇಂದ್ರದಿಂದ ಹೊಸ ರೀತಿ ಜಾರಿಯಾಗುವ ಸಾಧ್ಯತೆ ಇದೆ. ಹಗಲು ಹೊತ್ತಿನಲ್ಲಿ ಕಡಿಮೆ ದರ ಮತ್ತು ರಾತ್ರಿ ವೇಳೆ ಹೆಚ್ಚು ದರ ಅನ್ವಯವಾಗುವ ನೀತಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಣಿಜ್ಯ ಬಳಕೆದಾರರಿಗೆ 2024ರ ಏಪ್ರಿಲ್ 1ರಿಂದ ಮತ್ತು ಗೃಹಬಳಕೆದಾರರಿಗೆ 2025 ಏಪ್ರಿಲ್ 1ರಿಂದ ಈ ದರ ನಿಯಮ ಜಾರಿಗೆ ಬರಲಿದೆ. ಕಡಿಮೆ ಪ್ರಮಾಣದ ವಿದ್ಯುತ್ ಬಳಸುವ ಹಗಲು ಹೊತ್ತಿನಲ್ಲಿ ಶುಲ್ಕ ಕಡಿತವಾಗುತ್ತದೆ. ಹೆಚ್ಚು ಬೇಡಿಕೆಯ ವಿದ್ಯುತ್ ಬಳಕೆಯ ರಾತ್ರಿ ಹೊತ್ತಲ್ಲಿ ವಿದ್ಯುತ್ ದರ ಹೆಚ್ಚಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.