ನವದೆಹಲಿ: ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುವ ಶುಲ್ಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಈ ಮೊದಲು 100 ರೂಪಾಯಿ ಇದ್ದ ಶುಲ್ಕವನ್ನು 50 ರೂಪಾಯಿಗೆ ಇಳಿಕೆ ಮಾಡಿದೆ. ಇದಕ್ಕೆ ಜಿಎಸ್ಟಿ ಅನ್ವಯವಾಗುತ್ತದೆ.
ಅಂಚೆ ಕಚೇರಿ ಗ್ರಾಹಕರು ಉಳಿತಾಯ ಖಾತೆಯಲ್ಲಿ 500 ರೂಪಾಯಿ ಇರಿಸಬೇಕು. ಆರ್ಥಿಕ ವರ್ಷದ ಅಂತ್ಯದಲ್ಲಿ ಇದಕ್ಕಿಂತ ಕಡಿಮೆ ಹಣ ಖಾತೆಯಲ್ಲಿ ಇದ್ದರೆ ದಂಡ ವಿಧಿಸಲಾಗುತ್ತದೆ, ಬಡ್ಡಿ ಪಾವತಿಯಾಗುವುದಿಲ್ಲ. ದಂಡ ಶುಲ್ಕವನ್ನು ಕಡಿತ ಮಾಡಿದ ನಂತರ ಖಾತೆಯಲ್ಲಿ ಹಣವಿಲ್ಲದಿದ್ದರೆ ಅಂತಹ ಖಾತೆಗಳು ಸ್ವಯಂಚಾಲಿತವಾಗಿ ಸ್ಥಗಿತವಾಗಲಿವೆ. ಸತತ ಮೂರು ವರ್ಷಗಳಿಂದ ಯಾವುದೇ ವಹಿವಾಟು ನಡೆಸದ ಸೈಲೆಂಟ್ ಖಾತೆಗಳಲ್ಲಿಯೂ ಕನಿಷ್ಠ ಮೊತ್ತ ಕಾಯ್ದುಕೊಳ್ಳುಬೇಕು. ಇಲ್ಲದಿದ್ದರೆ ದಂಡ ಹಾಕಲಾಗುವುದು ಎಂದು ಹೇಳಲಾಗಿದೆ.