ಅಂಚೆ ಕಚೇರಿಯ ಸಣ್ಣಉಳಿತಾಯಗಳ ಯೋಜನೆಗಳಿಂದ ಗ್ಯಾರಂಟಿ ರಿಟರ್ನ್ಸ್ ಇರುವ ಕಾರಣ ಬಹಳ ಜನರಿಗೆ ಇದೊಂದು ಮೆಚ್ಚಿನ ಉಳಿತಾಯ ಯೋಜನೆಯಾಗಿದೆ. ಅಂಚೆ ಕಚೇರಿಗಳು ಕೊಡಮಾಡುವ ಅನೇಕ ಸಣ್ಣ ಉಳಿತಾಯಗಳ ಯೋಜನೆಗಳ ನಡುವೆ, ಮಾಸಿಕ ಆದಾಯದ ಸ್ಕೀಂ ಮೇಲೆ ಬಹಳ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ.
1000 ರೂ.ಗಳ ಗುಣಕಗಳಲ್ಲಿ ಖಾತೆ ತೆರೆಯುವ ಅವಕಾಶವಿರುವ ಈ ಯೋಜನೆಯಲ್ಲಿ 4.5 ಲಕ್ಷ ರೂ.ಗಳವರೆಗೂ ಏಕ ಖಾತೆ ಹಾಗೂ 9 ಲಕ್ಷ ರೂ.ಗಳವರೆಗೂ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ.
ಬಿಪಿಎಲ್ ಕಾರ್ಡುದಾರರ ಪಡಿತರ ಹೆಚ್ಚಳಕ್ಕೆ ಸಿದ್ದರಾಮಯ್ಯ ಒತ್ತಾಯ
ನಿಮ್ಮ ಎಂಐಎಸ್ ಖಾತೆ ತರೆಯಲು ನೀವೀಗ ಯಾವದೇ ಅಂಚೆ ಕಚೇರಿಗೆ ಭೇಟಿ ಕೊಡುವ ಅಗತ್ಯವಿಲ್ಲ. ಬದಲಾಗಿ ನೀವೇ ಅಂಚೆ ಕಚೇರಿಯ ಖಾತೆಯನ್ನು ಐಪಿಪಿಪಿ ಅಪ್ಲಿಕೇಶನ್ ಮೂಲಕ ನಿಮ್ಮ ಮನೆಯಿಂದಲೇ ತೆರೆಯಬಹುದಾಗಿದೆ. ಅಂಚೆ ಕಚೇರಿಯನ್ನು ಖಾತೆ ತೆರೆಯುವ ಅಷ್ಟೂ ಪ್ರಕ್ರಿಯೆಯ ವಿವರ ಇಲ್ಲಿದೆ.
1. ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಅನ್ನು ನಿಮ್ಮ ಮೊಬೈಲ್‌ಗೆ ಡೌನ್ಲೋಡ್ ಮಾಡಿಕೊಳ್ಳಿ.
2. ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆದು ’ಓಪನ್ ಅಕೌಂಟ್’ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಪೆನ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.
4. ಒಟಿಪಿ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ.
5. ನಿಮ್ಮ ತಾಯಿಯ ಹೆಸರು, ಶೈಕ್ಷಣಿಕ ವಿದ್ಯಾರ್ಹತೆ, ವಿಳಾಸ ಹಾಗೂ ನಾಮಿನೀ ಮಾಹಿತಿಯನ್ನು ಕೊಡಿ.
6. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ನೆನೆಪಿರಲಿ: ಡಿಜಿಟಲ್ ಉಳಿತಾಯ ಖಾತೆ ಒಂದು ವರ್ಷಕ್ಕೆ ಮಾತ್ರವೇ ವಾಯಿದೆ ಹೊಂದಿರುತ್ತದೆ. ವರ್ಷದ ಒಳಗೆ ಬಯೋಮೆಟ್ರಿಕ್ ಪ್ರಮಾಣೀಕರಣ ಮಾಡಿ ಸಾಮಾನ್ಯ ಉಳಿತಾಯ ಖಾತೆಯನ್ನು ತೆರೆಯಿಸಿಕೊಳ್ಳಿ.
ಅಂಚೆ ಕಚೇರಿ ಉಳಿತಾಯ ಖಾತೆಯ ಮೂಲಕ ಈ ಎಲ್ಲಾ ಹೆಚ್ಚುವರಿ ಅನುಕೂಲಗಳು ಸಿಗಲಿವೆ.
1. ಚೆಕ್ ಪುಸ್ತಕ
2. ಎಟಿಎಂ ಕಾರ್ಡ್
3. ಇ-ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್
4. ಆಧಾರ್ ಸೀಡಿಂಗ್
5.ಅಟಲ್ ಪಿಂಚಣಿ ಯೋಜನೆ
6. ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ
7. ಪ್ರಧಾನ ಮಂತ್ರಿ ಜೀವನ ಜೀವನ ಜ್ಯೋತಿ ಬೀಮಾ ಯೋಜನೆ