ಜನಸಾಮಾನ್ಯರಿಗೆ ಅನುಕೂಲವಾಗಲು ಅಂಚೆ ಕಚೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಅಂಚೆ ಕಚೇರಿ ಈಗ ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಬದಲಾಯಿಸಿದೆ. ಅಂಚೆ ಕಚೇರಿ ಗ್ರಾಹಕರು ಈ ಬಗ್ಗೆ ತಿಳಿಯದೆ ಹೋದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.
ಅಂಚೆ ಕಚೇರಿ ಖಾತೆಯ ಕನಿಷ್ಠ ಬಾಕಿ ಮಿತಿಯನ್ನು 50 ರೂಪಾಯಿಯಿಂದ 500 ರೂಪಾಯಿಗೆ ಹೆಚ್ಚಿಸಿದೆ. ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂಪಾಯಿಗಳಿಲ್ಲದಿದ್ದರೆ, ಹಣಕಾಸಿನ ವರ್ಷದ ಕೊನೆಯ ಕೆಲಸದ ದಿನದಂದು, ಅಂಚೆ ಕಚೇರಿ ನಿಮಗೆ 100 ರೂಪಾಯಿಗಳನ್ನು ದಂಡವಾಗಿ ವಿಧಿಸುತ್ತದೆ. ಇದನ್ನು ಪ್ರತಿವರ್ಷ ಮಾಡಲಾಗುತ್ತದೆ.
ಈ ಖಾತೆಗಳಲ್ಲಿ ಯಾವುದೇ ಹಣವಿಲ್ಲದೆ ಹೋದಲ್ಲಿ ಈ ಖಾತೆ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ. ಅಂಚೆ ಕಚೇರಿ ಪ್ರಸ್ತುತ ವೈಯಕ್ತಿಕ, ಜಂಟಿ ಉಳಿತಾಯ ಖಾತೆಗಳಿಗೆ ವರ್ಷಕ್ಕೆ ಶೇಕಡಾ 4 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ 500 ರೂಪಾಯಿ ಇರಬೇಕು. ಈವರೆಗೂ ಖಾತೆಯನ್ನು ಆಧಾರ್ಗೆ ಲಿಂಕ್ ಮಾಡದೆ ಹೋದಲ್ಲಿ ತಕ್ಷಣ ಮಾಡಿ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯಲ್ಲಿ ಸಾಕಷ್ಟು ಸೌಲಭ್ಯವಿದೆ. ಚೆಕ್ ರಹಿತ ಖಾತೆ ತೆರೆಯಲು 50 ರೂಪಾಯಿ ಕನಿಷ್ಠ ಹಣ ಪಾವತಿಸಬೇಕು. ಅಪ್ರಾಪ್ತ ವ್ಯಕ್ತಿಯ ಹೆಸರಿನಲ್ಲಿ ಸಹ ಖಾತೆಯನ್ನು ತೆರೆಯಬಹುದು. ಸರ್ಕಾರದ ಸಬ್ಸಿಡಿಯ ಲಾಭ ಪಡೆಯಲು ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಆಧಾರ್ಗೆ ಲಿಂಕ್ ಮಾಡಬೇಕು. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸುತ್ತೋಲೆ ಹೊರಡಿಸಿದೆ.